Friday, April 18, 2025
Google search engine

Homeರಾಜಕೀಯನಾನು ಸೋತು ಮನೆಯಲ್ಲಿ ಕುಳಿತಿದ್ದೇನೆ, ನನಗಂತೂ ಟಿಕೆಟ್ ಕೊಡಬೇಕು: ಬಿ.ಸಿ.ಪಾಟೀಲ್ ಪಟ್ಟು

ನಾನು ಸೋತು ಮನೆಯಲ್ಲಿ ಕುಳಿತಿದ್ದೇನೆ, ನನಗಂತೂ ಟಿಕೆಟ್ ಕೊಡಬೇಕು: ಬಿ.ಸಿ.ಪಾಟೀಲ್ ಪಟ್ಟು

ಹಾವೇರಿ: ಒಬ್ಬ ಗ್ರಾಮ ಪಂಚಾಯತಿ ಸದಸ್ಯ ತನ್ನ ಸ್ಥಾನ ತ್ಯಾಗ ಮಾಡಲ್ಲ. ಅಂತಹದರಲ್ಲಿ ನಾವು ತ್ಯಾಗ ಮಾಡಿದೀವಿ. ನಾನು ಈಗ ಸೋತು ಮನೆಯಲ್ಲಿ ಕುಳಿತುಕೊಂಡಿದ್ದೇನೆ. ನನಗಂತೂ ಟಿಕೆಟ್ ಕೊಡಬೇಕು ಅಷ್ಟೇ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಆಗ್ರಹಿಸಿದರು. ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮಗೆ ಕೊಡುವುದರಲ್ಲಿ ನ್ಯಾಯ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂತು. ೨೦೨೩ರಲ್ಲಿ ಬಿಜೆಪಿ ಯಾಕೆ ಸೋತಿತು ಎಂದು ಎಲ್ಲರಿಗೂ ಗೊತ್ತು. ನಾವೆಲ್ಲಾ ಸೋತಿದ್ದೇವೆ, ನಮ್ಮ ಹಿತವನ್ನೂ ಅವರು ಕಾಯಲಿ. ಅದರ ಜವಾಬ್ದಾರಿ ಅವರಿಗೆ ಇದೆ ಅಲ್ವಾ ಎಂದು ಪ್ರಶ್ನಿಸಿದರು. ನಮಗೆ ಹೆದರಿಸುವುದು ಬೆದರಿಸುವುದು ಗೊತ್ತಿಲ್ಲ.

ಸೈಲೆಂಟ್ ಇದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ಈಗಾಗಲೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ನಾನು ಹಾವೇರಿ ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಬೇಕು ಎಂದರು. ಟಿಕೆಟ್ ವಿಚಾರವಾಗಿ ಬಿ ವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದೀನಿ. ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವವನಲ್ಲ. ನನಗೆ ಟಿಕೆಟ್ ಕೊಡಬೇಕು ಅಂತ ವಾದ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular