ಮಂಗಳೂರು (ದಕ್ಷಿಣ ಕನ್ನಡ): ನಾನು ಮೊದಲು ಜಿಲ್ಲಾಧಿಕಾರಿಯಾಗಿದ್ದೆ. ಈಗ ನಾನು ಸಂಸದನಾಗಿ ಆಯ್ಕೆಯಾಗಿ ಈಗ ಮಂಗಳೂರಿಗೆ ಬಂದಿದ್ದೀನಿ. ಇದೇ ವೇಳೆ ನನಗೆ ಮಂಗಳೂರು ಜನರು ಕೊಟ್ಟಿರೋ ಸ್ವಾಗತ ಬಹಳ ಖುಷಿ ನೀಡಿದೆ ಎಂದು ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಅವರು ಮಂಗಳೂರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.