Saturday, April 19, 2025
Google search engine

Homeರಾಜ್ಯನಾನು, ನನ್ನ ಮಗ ಜೈಲಿಗೆ ಹೋಗುವಂತ ಅಪರಾಧ ಮಾಡಿಲ್ಲ : ರೇವಣ್ಣ ವಿರುದ್ಧ ಶಾಸಕ ಜಿಟಿ...

ನಾನು, ನನ್ನ ಮಗ ಜೈಲಿಗೆ ಹೋಗುವಂತ ಅಪರಾಧ ಮಾಡಿಲ್ಲ : ರೇವಣ್ಣ ವಿರುದ್ಧ ಶಾಸಕ ಜಿಟಿ ದೇವೇಗೌಡ ಕಿಡಿ

ಮೈಸೂರು : ಎಚ್ ಡಿ ಕುಮಾರಸ್ವಾಮಿ ಒಂದು ವೇಳೆ ಗುಟುರು ಹಾಕಿಲ್ಲದಿದ್ದರೆ, ಶಾಸಕ ಜಿಟಿ ದೇವೇಗೌಡ ಜೈಲಿಗೆ ಹೋಗಬೇಕಾಗಿತ್ತು. ಜಿಟಿ ದೇವೇಗೌಡರನ್ನು ಅಂದು ಜೈಲಿಗೆ ಹೋಗೋದನ್ನು ತಪ್ಪಿಸಿದ್ದು ಎಚ್ ಡಿ ಕುಮಾರಸ್ವಾಮಿ ಎಂದು ಎಚ್ ಡಿ ರೇವಣ್ಣ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಜಿಟಿ ದೇವೇಗೌಡ ನಾನು, ನನ್ನ ಮಗ ಜೈಲಿಗೆ ಹೋಗುವಂತ ಅಪರಾಧ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಟಿ ದೇವೇಗೌಡಗೆ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು ಎಂಬ ಎಚ್ ಡಿ ರೇವಣ್ಣ ಹೇಳಿಕೆಗೆ ರಾಜಕೀಯವಾಗಿ ನನ್ನ ವಿರುದ್ಧ ಯಾರೂ ಕೂಡ ದೂರು ನೀಡಿಲ್ಲ. ಏನು ಮಾತನಾಡಬಾರದು ಅಂತ ನಿರ್ಧಾರ ಮಾಡಿದ್ದೇನೆ ಆದರೆ ಪದೇ ಪದೇ ನನ್ನ ಹೆಸರನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ? ಎಂದು ಜಿಟಿ ದೇವೇಗೌಡ ಎಚ್‌ಡಿ ರೇವಣ್ಣ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯ ಸೇರಿ ಯಾರು ನನ್ನನ್ನು ಬಂಧಿಸುವಂತೆ ಹೇಳಿಲ್ಲ. ಯಾವುದಾದರೂ ಪ್ರಕರಣ ಇದ್ದರೆ ತಾನೆ ಬಂಧಿಸುವುದು? ಈ ರೀತಿ ಚಿಲ್ಲರೆ ಕೆಲಸ ನಮ್ಮ ಜಿಲ್ಲೆಯಲ್ಲಿ ಆಗಿಲ್ಲ ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ ವೈಯಕ್ತಿಕವಾಗಿ ಯಾವತ್ತು ಏನನ್ನು ಮಾಡಿಲ್ಲ. ರೇವಣ್ಣ ಬೆಳಗಾವಿ ಅಧಿವೇಶನಕ್ಕೆ ಬಂದಾಗ ಈ ಬಗ್ಗೆ ಕೇಳುತ್ತೇನೆ. ಏಕೆ ಈ ರೀತಿ ಹೇಳಿದ್ದೀರ ಅಂತ ಕೇಳುತ್ತೇನೆ.

ನಾನು ನನ್ನ ಮಗ ಜೈಲಿಗೆ ಹೋಗಬೇಕಿತ್ತು ಅಂತ ರೇವಣ್ಣ ಹೇಳಿದ್ದಾರೆ. ಜಿ ಟಿ ದೇವೇಗೌಡ ಮತ್ತು ಮಗ ಯಾಕೆ ಜೈಲಿಗೆ ಹೋಗುತ್ತಾರೆ? ಎಂದು ಪ್ರಶ್ನಿಸಿದರು. ನಾನು ಮತ್ತು ನನ್ನ ಮಗನ ವಿರುದ್ಧ ಯಾವುದೇ ದೂರುಗಳು ಇಲ್ಲ. ನಾವು ಜೈಲಿಗೆ ಹೋಗುವ ಅಪರಾಧಗಳನ್ನು ಮಾಡಿಲ್ಲ. ಎಚ್ ಡಿ ರೇವಣ್ಣ ಯಾಕೆ ಹೀಗೆ ಹೇಳಿದ್ದರು ನನಗೆ ಗೊತ್ತಿಲ್ಲ. ವಿಚಾರವನ್ನು ಸದನದಲ್ಲೇ ರೇವಣ್ಣ ಬಳಿ ಕೇಳಿಕೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ತಿಳಿಸಿದರು.

RELATED ARTICLES
- Advertisment -
Google search engine

Most Popular