Friday, April 18, 2025
Google search engine

Homeರಾಜ್ಯಸುದ್ದಿಜಾಲಜನಸೇವೆ ಮಾಡುವ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೇನೆ ಹೊರತು, ರಾಜಕೀಯ ಮಾಡುವುದಕ್ಕಲ್ಲ: ಸಂಸದ ಸಿ.ಎನ್.ಮಂಜುನಾಥ್

ಜನಸೇವೆ ಮಾಡುವ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೇನೆ ಹೊರತು, ರಾಜಕೀಯ ಮಾಡುವುದಕ್ಕಲ್ಲ: ಸಂಸದ ಸಿ.ಎನ್.ಮಂಜುನಾಥ್

ದಿವಂಗತ ಕೆ.ಆರ್.ಲಕ್ಕೇಗೌಡರ ಮೊದಲನೇ ವರ್ಷದ ಪುಣ್ಯ ಸ್ಮರಣೆ


ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ನಾನು ರಾಜಕಾರಣಕ್ಕೆ ಬಂದಿರುವುದು ರಾಜಕೀಯ ಮಾಡುವುದಕ್ಕಲ್ಲಾ ಬದಲಾಗಿ ಜನಸೇವೆ ಹಾಗೂ ಸಮಾಜ ಸೇವೆ ಮಾಡಬೇಕೆಂಬ ಉದ್ದೇಶದಿಂದ ಎಂದು ಬೆಂಗಳೂರು ಜಿಲ್ಲಾ ಗ್ರಾಮಾಂತರ ಸಂಸದ ಸಿ.ಎನ್.ಮಂಜುನಾಥ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್ ಸಮುದಾಯ ಭವನದಲ್ಲಿ ನಿವೃತ್ತ ಉಪನ್ಯಾಸಕ ದಿವಂಗತ ಕೆ.ಆರ್.ಲಕ್ಕೇಗೌಡರ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ನಡೆದ ಅವರ ಜೀವನ ಚರಿತ್ರೆ( ಆತ್ಮಕಥೆ) ವನಸುಮ ಎರಡನೇ ಆವೃತ್ತಿ ಬಿಡುಗಡೆ ಮತ್ತು ತಮಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸದನಾಗಿದ್ದರು ನನ್ನ ಮೊದಲ ಆಧ್ಯತೆ ವೈಧ್ಯ ವೃತ್ತಿಗೆ ನೀಡಲಿದ್ದು ವಾರದಲ್ಲಿ ಎರಡು ದಿನ ಉಚಿತ ಸೇವೆ ಮಾಡುತ್ತಿದ್ದು ಆ ಮೂಲಕ ದೇಶ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಕೆಲಸ ಮಾಡಲು ನಾನು ಬದ್ದನಾಗಿದ್ದು ಅದು ಅಸಾಧ್ಯ ಎನಿಸಿದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುವುದು ಪ್ರಮುಖವಲ್ಲಾ ಅದರೊಂದಿಗೆ ಮನುಷ್ಯತ್ವ ಇರುವವರು ಹೆಚ್ಚಿಗೆ ಇರಬೇಕಿದ್ದು ಕೆಲವರು ಜೀವಂತವಾಗಿದ್ದರು ಸತ್ತಂತೆ ಇರುತ್ತಾರೆ ಆದರೆ ಕೆ.ಆರ್.ಲಕ್ಕೇಗೌಡರು ಸತ್ತಿದ್ದರೂ ನಮ್ಮ ನಡುವೆ ಬದುಕಿದ್ದಾರೆಂದರು. ಆದರ್ಶ ಶಿಕ್ಷಕರಾಗಿ, ಉತ್ತಮ ಪುರಸಭೆಯ ಸದಸ್ಯರಾಗಿ ಅದರ ಜತೆಗೆ ಸಮಾಜ ಮುಖಿಯಾಗಿದ್ದ ಅವರು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದು ಇಂತಹವರು ಸಾಧಕರು ಮತ್ತು ಸಮಾಜ ಸೇವಕರಿಗೆ ಮಾದರಿ ಎಂದರು.

ಬೇರೆಯವರಿಗೆ ಸಹಾಯ ಮಾಡಿ ಸಂಕಷ್ಠದಲ್ಲಿರುವವರಿಗೆ ಹೆಗಲು ಕೊಡುವುದು ನಿಜವಾದ ಮನುಷ್ಯತ್ವ ಅಂತಹ ಮಾನವೀಯತೆ ಬೆಳೆಸಿಕೊಂಡಿದ್ದ ಕೆ.ಆರ್.ಲಕ್ಕೇಗೌಡರು ನಮ್ಮ ನಡುವೆ ಇದ್ದ ಆದರ್ಶ ಪುರುಷ ಎಂದು ಪ್ರಶಂಸಿದರು. ಕೆ.ಆರ್.ಲಕ್ಕೇಗೌಡರ ಸಂಸ್ಕಾರ ಅವರ ಕುಟುಂಬದವರಿಗೂ ಬಂದಿದ್ದು ಇದು ಅನುಕರಣೀಯವಾಗಿದ್ದು ಅವರು ಸಮಾಜದ ವೈಧ್ಯರಾಗಿದ್ದರಲ್ಲದೆ ನೊಂದವರ ದನಿಯಾಗಿ ಬದುಕಿಗೆ ಆಸರೆಯಾಗಿದ್ದರೆಂದು ಬಣ್ಣಿಸಿದರು.

ಸಮಾಜ ಮುಖಿ ಚಿಂತನೆ ಮತ್ತು ಪರೋಪಕಾರಿ ವ್ಯಕ್ತಿತ್ವ ಬೆಳೆಸಿಕೊಂಡವರು ಶಾಶ್ವತವಾಗಿ ಜೀವಿಸಲಿದ್ದು ಅಂತಹವರ ಸಾಲಿಗೆ ಸೇರಿರುವ ಕೆ.ಆರ್.ಲಕ್ಕೇಗೌಡರು ಮಾನವೀಯತೆಯ ಪ್ರತೀಕ ಎಂದು ಪ್ರಶಂಸಿಸಿದ ಸಂಸದರು ದೇಶದ ಜನ ಸಮನಖ್ಯೆ ಮುಖ್ಯವಲ್ಲಾ ಮನುಷ್ಯತ್ವ ಇರುವವರ ಸಂಖ್ಯೆ ಪ್ರಮುಖ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಆರ್.ಲಕ್ಕೇಗೌಡರ ಯಶೋಗಾಥೆಯ ವನಸುಮ ಪುಸ್ತಕದ ಸಂಚಿಕೆಯನ್ನು ಬಿಡುಗಡೆಮಾಡಿದ ಸಂಸದ ಹಾಗೂ ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರಿಗೆ ನಾಗರೀಕ ಸನ್ಮಾನ ಮಾಡಲಾಯಿತು. ಬಳಿಕ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಮಾತನಾಡಿ ಚುನಾಯಿತ ಜನ ಪ್ರತಿನಿಧಿಗಳು ತಮ್ಮನ್ನು ತಾವೇ ರಕ್ಷಿಸಿಕೊಂಡು ನಾನು ಮಾಡಿದ್ದೆಲ್ಲಾ ಸರಿ ಎಂಬ ಸ್ಥಿತಿಗೆ ತಲುಪಿರುವುದು ಅತ್ಯಂತ ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಪಟ್ಟಣದ ಪಿಎಲ್ಡಿ ಬ್ಯಾಂಕ್ ಸಮುದಾಯ ಭವನದಲ್ಲಿ ನಿವೃತ್ತ ಉಪನ್ಯಾಸಕ ದಿವಂಗತ ಕೆ.ಆರ್.ಲಕ್ಕೇಗೌಡರ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ನಡೆದ ಅವರ ಜೀವನ ಕಥನದ ವನಸುಮ ಎರಡನೇ ಆವೃತ್ತಿ ಬಿಡುಗಡೆ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಸಿ.ಎನ್.ಮಂಜುನಾಥ್ ಅವರ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ರಾಜಕೀಯ ನಾಯಕರು ತಮ್ಮನ್ನು ಓದಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲಾ ಬದಲಾಗಿ ಸಂದಿಗ್ದ ಸ್ಥಿತಿಯಲ್ಲಿದ್ದು ಜನರು ಸಹ ಪರಿಸ್ಥಿತಿಯ ಚಕ್ರವ್ಯೂಹದಲ್ಲಿ ಸಿಲುಕಿದ್ದು ಭವಿಷ್ಯದಲ್ಲಿ ಪ್ರಶ್ನೆ ಮಾಡದಿದ್ದರೆ ಗಂಡಾಂತರ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಳುವ ಸರ್ಕಾರಗಳು ಪ್ರತಿಯೊಂದನ್ನು ರಾಜಕೀಯ ಹಿತದೃಷ್ಠಿಯಿಂದ ನೋಡುತ್ತಿದ್ದು ಅನುಪಯುಕ್ತ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವುಗಳಿಂದ ಯಾವುದೇ ಪ್ರಯೋಜನವಿಲ್ಲಾ ಅದಕ್ಕಿಂತ ಪ್ರತಿ ಪ್ರಜೆಗೂ ಉಚಿತ ಅರೋಗ್ಯ ಮತ್ತು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ದಯವೆ ಧರ್ಮದ ಮೂಲವಯ್ಯ ಎಂಬ ವಚನದ ಸಾರದಂತೆ ಬದುಕಿ ಬಾಳಿದ ದಿವಂಗತ ಕೆ.ಆರ್.ಲಕ್ಕೇಗೌಡರು ಮಾನವ ಕುಲಕ್ಕೆ ಮಾದರಿಯಾಗಿದ್ದು ತಮ್ಮಂತೆ ಮಕ್ಕಳಿಗೂ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವನೆ ಕಲಿಸಿ ನಾಡಿನ ಆಸ್ತಿಯನ್ನಾಗಿ ಮಾಡಿದ್ದು ಇದು ಎಲ್ಲರೂ ಹೆಮ್ಮೆಪಡುವ ವಿಚಾರ ಎಂದರು.

ತಮ್ಮ ಬದುಕಿನುದ್ದಕ್ಕೂ ಜಾತ್ಯಾತೀತವಾಗಿ ಜೀವಿಸಿ ಉತ್ತಮರನ್ನು ಪ್ರೋತ್ಸಾಹಿಸಿ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡು ಕೆ.ಆರ್.ಲಕ್ಕೇಗೌಡರು ನಮ್ಮೂರಿನ ಹೆಮ್ಮೆ ಎಂದು ನುಡಿದರು. ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿ ಸಾವಿರಾರು ಮಂದಿಯ ಬದುಕು ಬದಲಿಸಿದ ನಿವೃತ್ತ ಉಪನ್ಯಾಸಕ ದಿವಂಗತ ಕೆ.ಆರ್.ಲಕ್ಕೇಗೌಡರು ನಮ್ಮೂರಿನ ಹೆಮ್ಮೆಯ ಪುತ್ರ ಹೇಳಿದರು.

ಇಂತಹ ಸಮಾಜಮುಖಿ ವ್ಯಕ್ತಿಯ ಕುಂಟುಬದ ಹಿಂದೆ ನಿಲ್ಲಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದ್ದು ತಮ್ಮ ಕುಟುಂಬವನ್ನೆ ಜನ ಸೇವೆಗೆ ಅರ್ಪಿಸಿದ ಅವರು ಅಜರಾಮರ ಎಂದರು. ಸ್ವಂತ ಮತ್ತು ಸ್ವಾರ್ಥಕ್ಕೆ ಬದುಕಿ ಸಮಾಜದ ಬಗ್ಗೆ ಚಿಂತಿಸದ ಜನರಿರುವ ಇಂದಿನ ದಿನಗಳಲ್ಲಿ ಕುಟುಂಬವನ್ನೆ ಜನ ಸೇವೆಗೆ ಮುಡುಪಿಟ್ಟಿರುವುದು ಸಾಧನೆಯೆ ಸರಿ ಎಂದು ಕೊಂಡಾಡಿದರು.

ಸಂಸದರಾಗಿರುವ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ವೈಧ್ಯ ವೃತ್ತಿಯ ಘನತೆ ಎತ್ತಿ ಹಿಡಿದ ಮಹಾ ಪುರುಷನಾಗಿದ್ದು ಅವರ ನಡೆ ಮತ್ತು ನುಡಿ ಹಾಗೂ ಮಾನವೀಯತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನವ ನಗರ ಅರ್ಬನ್ ಅಧ್ಯಕ್ಷ ಕೆ.ಎನ್.ಬಸಂತ್, ಬಿಜೆಪಿ ಹಿರಿಯ ಮುಖಂಡ ಮಿರ್ಲೆ ಶ್ರೀನಿವಾಸ ಗೌಡ, ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ , ಜಿ.ಪಂ.ಮಾಜಿ ಸದಸ್ಯರಾದ ಅಮಿತ್ ವಿ.ದೇವರಹಟ್ಟಿ, ಸಾ.ರಾ.ನಂದೀಶ್, ಎಂ.ಟಿ.ಕುಮಾರ್, ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಉಮೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ, ಜಿಲ್ಲಾ ಗ್ರಾಮಾಂತರ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿವೆಂಕಟೇಶ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಹುಣಸೂರು ಜೆಡಿಎಸ್ ಅಧ್ಯಕ್ಷ ದೇವರಾಒಡೆಹನಸೋಗೆ,ಶ್ರೀರಂಗಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಸಂಜಯ್, ಎಪಿಎಂಸಿ ಮಾಜಿ ನಿರ್ದೇಶಕ ಬಂಡಹಳ್ಳಿಕುಚೇಲ, ದಲಿತ ಮುಖಂಡ ಹನಸೋಗೆ ನಾಗರಾಜ್, ಹಂಪಾಪುರ ಸೂರಿ, ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ಸಾಮರಸ್ಯ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಪುರುಷೋತ್ತಮ್, ಕೆ.ಆರ್.ಲಕ್ಕೇಗೌಡರ ಪತ್ನಿ ಜಯಲಕ್ಷ್ಮಮ್ಮ, ಪುತ್ರರಾದ ಕೆ.ಎಲ್.ರಮೇಶ್, ಕೆ.ಎಲ್.ಜಗದೀಶ್, ಕೆ.ಎಲ್. ಹೇಮಂತ್, ಲೇಖಕ ದೀಪು, ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಹೆಚ್.ಡಿ.ಪ್ರಭಾಕರಜೈನ್, ಮುಖಂಡರಾದ. ಹೊಸಹಳ್ಳಿಪುಟ್ಟರಾಜು, ಎಸ್.ಪಿ.ತಮ್ಮಯ್ಯ, ಅರ್ಜುನಹಳ್ಳಿ ಗಣೇಶ್,ಹೆಚ್.ಆರ್.ಮದುಚಂದ್ರ, ದಾಕ್ಷಾಯಿಣಿ. ರಾಜಲಕ್ಷ್ಮೀ, ಭಾಗ್ಯಮ್ಮ , ಬಂಡಹಳ್ಳಿ ಕುಚೇಲ, ಶಿಕ್ಷಕ ದರ್ಮೇಶ್, ಹೆಬ್ಬಾಳು ಜೀವನ್ , ಸಾ.ರಾ.ನಾಗೇಶ್, ವಕೀಲ ದೊಡ್ಡಕೊಪ್ಪಲು ರಮೇಶ್, ಘನತೆ ಕುಮಾರ್, ವಡ್ಡರವಿ, ಜೋಡಿಗೌಡನ ಕೊಪ್ಪಲು ದೀಪು ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular