Wednesday, March 4, 2026
Google search engine

Homeರಾಜಕೀಯನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ : ಡಿಕೆಶಿ

ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ : ಡಿಕೆಶಿ

ಬೆಂಗಳೂರು : ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಆಗುತ್ತದೆ ಎಂದು ಎಲ್ಲೂ ಹೇಳಿಲ್ಲ. ನಾನು ಯಾವತ್ತೂ ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ, ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ. ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸ್ಟ್ರೀಟ್‌ ಫೈಟರ್‌. ಯಾವ ರೀತಿ ಹೋರಾಟ ಮಾಡಬೇಕು ಎಂದು ನನಗೆ ತಿಳಿದಿದೆ. ಅಧಿಕಾರಕ್ಕಾಗಿ, ಪಕ್ಷದ ಒಳಗೆ ನಾನು ಹೋರಾಟ ಮಾಡುತ್ತಿಲ್ಲ. ಏನಿದ್ದರೂ ಪಕ್ಷದ ಹೊರಗೆ ನನ್ನ ಹೋರಾಟ. ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ. ಇನ್ನು, ನಾನು ಏತಕ್ಕಾಗಿ ಕ್ರಾಂತಿ ಮಾಡಲಿ. ನನಗೆ ನನ್ನ ಮೇಲೆ ನಂಬಿಕೆಯಿದೆ. ನಾನು ಭರವಸೆ ಮೇಲೆ ಬದುಕುತ್ತೇನೆ ಎಂದರು.

ಮುಂದುವರೆದು, ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿಲ್ಲ. ಕೆಲ ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದು ಬಿಟ್ಟರೆ ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿಯಾಗುತ್ತದೆ, ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಾರೆ ಎಂದು ನಾನು ಯಾವತ್ತೂ ಮಾತನಾಡಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿ ಮಾಡಿಸಲು ಹೊರಟವರು ಬೇರೆಯವರಿದ್ದಾರೆ ಎಂದರು.

ಇನ್ನೂ ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನ ಜವಾಬ್ದಾರಿ ತಿಳಿದಿದ್ದು, ಪಕ್ಷಕ್ಕೆ ನನ್ನಿಂದ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು. ನನ್ನಿಂದ ಶಿಸ್ತು ಉಲ್ಲಂಘನೆ ಆಗಬಾರದು. ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಆ ಸ್ಥಾನಕ್ಕೆ ಅನ್ಯಾಯ ಮಾಡಬಾರದು ಎಂಬುದು ತಿಳಿದಿದೆ. ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ.

ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ. ನಾವು ಕಟ್ಟಿ ಬೆಳೆಸಿರುವ ಪಕ್ಷವಿದು. ಲಕ್ಷಾಂತರ ಜನ ಕಾರ್ಯಕರ್ತರಿಗೆ ತೊಂದರೆಯಾಗಬಾರದು, ಅವರು ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ ಎಂಬುದು ತಿಳಿದಿದೆ ಎಂದು ತಿಳಿಸಿದರು.

ನನ್ನ ಮತ್ತು ಶಿವಕುಮಾರ್‌ ನಡುವೆ ಹಾಲು-ಜೇನಿನ ಸಂಬಂಧವಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಖಂಡಿತಾ ನಮ್ಮದು ಹಾಲು-ಜೇನಿನ ಸಂಬಂಧ. 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಹಾಗೆಯೇ ಇರುತ್ತದೆ. ಮುಖ್ಯಮಂತ್ರಿ ಅವರು ಅನುಭವದ ಮಾತನ್ನಾಡಿದ್ದಾರೆ. ಅವರು ನನ್ನನ್ನು ಬಹಳ ವರ್ಷಗಳಿಂದ ನೋಡಿದ್ದಾರೆ. ಅವರು ಬೇರೆ ಪಕ್ಷದಲ್ಲಿದ್ದಾಗಲೂ ನನ್ನನ್ನು ನೋಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರವೂ ನನ್ನನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ನಾನು ಏನು ಎಂಬುದು ಅವರಿಗೆ ತಿಳಿದಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

RELATED ARTICLES
- Advertisment -
Google search engine

Most Popular