Friday, April 4, 2025
Google search engine

Homeರಾಜಕೀಯಮುಡಾ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ, ನಾನೇಕೆ ರಾಜೀನಾಮೆ ಕೊಡ್ಬೇಕು? - ಹೆಚ್‌ಡಿಕೆ ಕಿಡಿ

ಮುಡಾ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ, ನಾನೇಕೆ ರಾಜೀನಾಮೆ ಕೊಡ್ಬೇಕು? – ಹೆಚ್‌ಡಿಕೆ ಕಿಡಿ

  • ಯಾವನೋ ಬರೆದುಕೊಟ್ಟಿದ್ದನ್ನ ತುತ್ತೂರಿ ಊದಿದ್ದಾರೆ ಎಂದ ಕೇಂದ್ರ ಸಚಿವ

ಮಂಡ್ಯ: ತನಿಖೆ ಮಾಡಲಿ ಮುಡಾ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ. ನಾನು ಯಾಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಜಿಲ್ಲೆಯ ಉರಮಾರಕಸಲಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಡಿನೋಟಿಫಿಕೇಷನ್ ವಿಚಾರವಾಗಿ ಕಾಂಗ್ರೆಸ್ ಸಚಿವರು ರಾಜೀನಾಮೆಗೆ ಒತ್ತಾಯ ಮಾಡುತ್ತಿದ್ದಾರೆ. ನನಗೂ ಮುಡಾ ಹಗರಣಕ್ಕೂ ಏನು ಸಂಬಂಧ? ಕನ್ನಡ ಓದೋಕೊ ಬರುತ್ತೋ, ಇಂಗ್ಲಿಷ್ ಓದೋಕೊ ಬರುತ್ತೋ ಕೇಳಿ. ಮೊದಲು ಆ ಪೇಪರ್‌ನಲ್ಲಿ ಏನಿದೆ ಎಂದು ಸರಿಯಾಗಿ ಕುಳಿತು ನೋಡಲು ಹೇಳಿ ಎಂದರು.

ಆ ಪೇಪರ್‌ನಲ್ಲಿ ಏನಿದೆ? ಅವರೇನೂ ಹುಚ್ಚರಾ ರಾಜೀನಾಮೆ ಕೇಳವುದಕ್ಕೆ. ಅವರು ಕೇಳಿದರೂ ಅಂತಾ ನಾನು ರಾಜೀನಾಮೆ ಕೊಡಬೇಕು? ಯಾಕೆ ರಾಜೀನಾಮೆ ಕೊಡಬೇಕು? ಏನು ತಪ್ಪು ಮಾಡಿದ್ದೇನೆ? ದಾಖಲೆಗಳನ್ನು ಅವರು ಸರಿಯಾಗಿ ನೋಡಿದ್ದರಾ? ಯಾವನೋ ಬರೆದುಕೊಟ್ಟಿದ್ದಾನೆ ಅದನ್ನು ಬಂದು ತುತ್ತೂರಿ ಊದಿದ್ದಾರೆ. ತನಿಖೆ ಮಾಡಲಿ ಮುಡಾ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ. 2015ರಿಂದ ಬಿಟ್ಟುಕೊಂಡು ಇದ್ದಾರೆ. ನಾಲ್ಕು ವರ್ಷ ಏನು ಮಾಡುತ್ತಿದ್ದರು? ಅದರಲ್ಲಿ ನನ್ನ ಪಾತ್ರ ಏನಿದೆ ಹೇಳಲಿ. ಉತ್ತರ ಕೊಡುವ ವಿಚಾರವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.



RELATED ARTICLES
- Advertisment -
Google search engine

Most Popular