Friday, June 19, 2026
Google search engine

Homeರಾಜಕೀಯಪಕ್ಷಕ್ಕಾಗಿ ದೇಣಿಗೆ ಪಡೆದಿದ್ದೇನೆ : ಪಾಪದ ಹಣದಿಂದ ರಾಜಕೀಯ ಮಾಡಿಲ್ಲ : ಕುಮಾರಸ್ವಾಮಿ

ಪಕ್ಷಕ್ಕಾಗಿ ದೇಣಿಗೆ ಪಡೆದಿದ್ದೇನೆ : ಪಾಪದ ಹಣದಿಂದ ರಾಜಕೀಯ ಮಾಡಿಲ್ಲ : ಕುಮಾರಸ್ವಾಮಿ

ಮೈಸೂರು : ಮುಖ್ಯಮಂತ್ರಿ ಆಗಿದ್ದಾಗ ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ. ಈಗಲೂ ಕೇಂದ್ರದಲ್ಲಿ ಸಚಿವನಾಗಿದ್ದೇನೆ, ಎರಡು ಇಲಾಖೆಗಳನ್ನು ವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತಿದ್ದೇನೆ. ಅಲ್ಲೂ ನನ್ನ ಸಹಿಯನ್ನು ಮಾರಾಟಕ್ಕಿಟ್ಟಿಲ್ಲ ಎಂದು ಕೇಂದ್ರ ಸಚಿವ ಕುಮಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪಿಸುವವರಿಂದ ನಾನು ಪ್ರಮಾಣಪತ್ರ ಪಡೆದುಕೊಳ್ಳಬೇಕಿಲ್ಲ’ ಎಂದು ಹೇಳಿದರು. ನಮ್ಮೊಂದಿಗೇ ಇದ್ದು ಈಗ ಕಾಂಗ್ರೆಸ್‌ನಲ್ಲಿರುವವರು, ನನ್ನ ಬಂಡವಾಳವನ್ನೆಲ್ಲಾ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ, ಬಿಚ್ಚಿಡಲಿ’ ಎಂದು ಸವಾಲು ಹಾಕಿದರು.

ಚುನಾವಣೆ ಸಂದರ್ಭದಲ್ಲಿ ಮನೆಯಿಂದ ಹಣ ತಂದು ರಾಜಕಾರಣ ಮಾಡುವುದಕ್ಕಾಗುತ್ತಾ, ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷವನ್ನು ನಡೆಸಲಿಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ರಾಜ್ಯದಲ್ಲಿ ಲಾಟರಿ ನಿಷೇಧಿಸದಂತೆ ಕೋಟ್ಯಂತರ ರೂಪಾಯಿ ಸುರಿಯಲು ಬಂದಿದ್ದರು. ಪಾಪದ ಹಣದಿಂದ ರಾಜಕೀಯ ಮಾಡುವುದಿಲ್ಲ ಎಂದು ಅಧಿಕಾರಿಗೆ ಬೈದು ಕಳಿಸಿದ್ದೆ.

ಆದರೆ, ವಿಧಾನಪರಿಷತ್‌, ರಾಜ್ಯಸಭಾ ಚುನಾವಣೆಗಳ ಸಂದರ್ಭದಲ್ಲಿ ಟಿಕೆಟ್ ಕೊಡುವಾಗ ಪಕ್ಷಕ್ಕೆ ದೇಣಿಗೆ ತೆಗೆದುಕೊಂಡಿದ್ದೇನೆ. ಅದನ್ನು ಪಕ್ಷ ನಡೆಸಲು ಬಳಸಿದ್ದೇನೆ. ಅದನ್ನೇನೂ ನನ್ನ ಸ್ವಂತಕ್ಕೆ ಬಳಸಿಕೊಂಡಿಲ್ಲ’ ಎಂದರು.

RELATED ARTICLES
- Advertisment -
Google search engine

Most Popular