ಕೆ ಆರ್ ನಗರ: ಕೆಂಪೇಗೌಡ ಜಯಂತಿಯನ್ನು ಶಿಷ್ಟಾಚಾರ ಪ್ರಕಾರ ನಡೆಸಲಾಗಿದ್ದು, ಶಿಷ್ಟಾಚಾರದ ಬಗ್ಗೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅಣ್ಣೇಗೌಡ ರವರಿಗೆ ಅರಿವಿದೆ ಎಂದು ತಿಳಿದುಕೊಂಡಿದ್ದೇನೆ ಎಂದು ಮಾಜಿ ಪುರಸಭಾ ಸದಸ್ಯ ಸುಬ್ರಹ್ಮಣ್ಯ ತಿಳಿಸಿದರು.
ಇತ್ತೀಚಿಗೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅಣ್ಣೇಗೌಡ ರವರು ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕ ಸಾರಾ ಮಹೇಶ್ ರವರಿಗೆ ಕೆಂಪೇಗೌಡ ಜಯಂತಿಗೆ ಆಹ್ವಾನ ನೀಡದೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಭಾನುವಾರ ನಡೆದ ಕೆಂಪೇಗೌಡ ಜಯಂತಿಗೆ ಹಾಜರಾಗದೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಪುರಸಭಾ ಸದಸ್ಯ ಸುಬ್ರಹ್ಮಣ್ಯ ರವರು ಶಿಷ್ಟಾಚಾರದ ಪ್ರಕಾರ ಶಾಸಕರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಬೇಕು ಹಾಗೂ ಇದೊಂದು ತಾಲೂಕು ಆಡಳಿತದ ಕಾರ್ಯಕ್ರಮವಾಗಿದೆ. ಅಣ್ಣೇಗೌಡ ರವರಿಗೆ ಶಿಷ್ಟಾಚಾರದ ಅರಿವು ಇದೆ ಎಂದು ತಿಳಿದಿದ್ದೇನೆ ಅವರು ಈ ರೀತಿ ಮಾಡಿದ ಕೆಲಸ ಅವರಿಗೆ ಶೋಭೆ ತರುವುದು ಇಲ್ಲ ಎಂದರು.
ಆ ಒಂದು ಕಾರ್ಯಕ್ರಮ ತಾಲೂಕು ಆಡಳಿತ ವತಿಯಿಂದ ನಡೆಸಲಾಗಿದೆ ಎಂದರು. ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಹಾಜರಿದ್ದರು.