ಹಾವೇರಿ : ಕಾಂಗ್ರೆಸ್ ನವರ ಗ್ಯಾರಂಟಿಗಳನ್ನು ಸ್ವಾಗತಿಸುತ್ತೇನೆ. ಆದರೆ ಇದಕ್ಕೆ ಹೇಗೆ ದುಡ್ಡು ಕೂಡಿಸ್ತಾರೆ ಅಂದು ನೋಡಬೇಕು ಸಂಸದ ಶಿವಕುಮಾರ್ ಉದಾಸಿ ತಿಳಿಸಿದರು.
ಹಾವೇರಿಯ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಲೋಕಸಭ ವ್ಯಾಪ್ತಿಯಲ್ಲಿ ಯಾರಿಗೂ ಅನ್ಯಾಯ ಆಗೋಕೆ ಬಿಡಲ್ಲ. ನೀವೂ ಕೊಟ್ಟ ಮಾತಿನಂತೆ ಎಲ್ಲರಿಗೂ ಕೊಡಬೇಕು. ಕೇಂದ್ರ ಸರ್ಕಾರದ ಯೋಜನೆಗಳ ದುಡ್ಡನ್ನು ಕಟ್ ಮಾಡಿ ಬಳಕೆ ಮಾಡೋದು ಬೇಡ. ನಿಮ್ಮ ಗ್ಯಾರಂಟಿ ಮೇಲೆ ನೀವೂ ಅಧಿಕಾರಕ್ಕೆ ಬಂದಿದ್ದೀರಿ. ಅವರು ಸಮಯ ಕೇಳಿದ್ದಾರೆ. ಅಲ್ಲಿಯವರೆಗೂ ಕಾದು ನೋಡೊಣ ಎಂದರು.
ಎಂಪಿ ಎಲೆಕ್ಷನ್ ನಲ್ಲೂ ಗ್ಯಾರಂಟಿ ಮುಂದಿಟ್ಟುಕೊಂಡು ಗೆಲ್ತೇವಿ ಎಂಬ ಕಾಂಗ್ರೆಸ್ ಹೇಳಿಕೆ ಪ್ರತಿಕ್ರಿಯೆ ನೀಡಿ, ಯಾರು ಸೋಲೊಕೆ ಚುನಾವಣೆಯಲ್ಲಿ ನಿಲ್ತಾರೆ? ಅವರು ಸರ್ಕಾರ ಬಂದಿದೆ ಗೆಲ್ತೇವಿ ಅಂತಾ ಮಾತಾಡ್ತಾರೆ. ಪ್ರಧಾನಿ ಮೋದಿಯವರು ಎಲ್ಲೂ ಹಾಗೇ ಹೇಳಲ್ಲಾ.
15 ಲಕ್ಷ ಹಣ ಹಾಕ್ತೀವಿ ಅಂತಾ ಅಂದಿಲ್ಲಾ. ಬ್ಲಾಕ್ ಮನಿ ದುಡ್ಡು ತರುತ್ತೇವೆಂದು ಹೇಳಿದ್ದರು.
ಇದರಲ್ಲಿ ರಾಜಕೀಯ ಮಾಡ್ತಾರೆ ಎಂದರೆ ಎನ್ ಮಾಡೋಕೆ ಆಗೊಲ್ಲಾ ಎಂದು ತಿಳಿಸಿದರು.
ಆರ್ ಬಿ ಐ ದುಡ್ಡು ಸರ್ಕಲೂಷೆನ್ ಆಗುವಂತದ್ದು. ಪ್ರತಿಯೊಂದು ನೋಟಿನ ಲೈಫ್ 7 ವರ್ಷ ಇರುತ್ತದೆ. ಆ್ಯಕ್ಟಿನ ಪ್ರಕಾರ ಡಿ ಮಾನಿಟೆಜೇಷನ್ ಕೂಡಾ ಕಾನೂನಿನ ಪ್ರಕಾರ ಸರಿ ಇದೆ.
ಹೀಗಾಗಿ ಆರ್ ಬಿ ಐ ನೋಟು ಬದಲಿಸಿಕೊಳ್ಳಿ ಎಂದಿದೆ. ಇದು ಸಾಮಾನ್ಯ ಎಂದು ಹೇಳಿದರು.
ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ವಿಚಾರ ಕುರಿತು ಮಾತನಾಡಿ, ಹಸು ಆಗಲಿ ಗೋ ಮಾತೆ ಅಗಲಿ ತಾಯಿಯ ಸ್ವರೂಪ. ನಿಯಮ ತಂದ ಬಳಿಕ ನೋಡುತ್ತೇವೆ. ಭಾವನೆಗಳನ್ನು ಇಟ್ಟುಕೊಂಡು ಈ ಥರ ಮಾಡೋದು ಬೇಡ. ಸರ್ಕಾರ ಬಂದಿದೆ ಸುಮ್ಮನೆ ಕೆಲಸ ಮಾಡಿಕೊಂಡು ಹೋಗಿ ಎಂದು ಕಿವಿ ಮಾತು ಹೇಳಿದರು.
ಹಸು ಕಡಿದರೆ ತಪ್ಪೇನೂ ಎಂಬ ಕೈ ನಾಯಕರ ಮಾತಿಗೆ ಪ್ರತಿಕ್ರಿಯಿಸಿ, ನಾನು ಮೊದಲು ದೇವರ ಹೆಸರಿನಲ್ಲಿ ಪ್ರಮಾಣ ವಚನ ತಗೊಂಡಿದ್ದೆ. ಬಳಿಕ ಸತ್ಯ ಹಾಗೂ ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ತಗೊಂಡೆ. ನಾನು ಆಸ್ತಿಕ ಇದ್ದೆ. ಆ ಮೇಲೆ ನಾನು ನಾಸ್ತಿಕ ಆದೆ. ನಾನು ದೇವರನ್ನು ನಂಬಲ್ಲ. ಆದರೆ ಭಾವನೆಗಳಿಗೆ ಬೆಲೆ ಕೊಡುತ್ತೇನೆ. ಅವರವರ ಅಭಿಪ್ರಾಯ ಗೌರವಿಸಬೇಕು ಎಂದು ತಿಳಿಸಿದರು.