ರಾಮನಗರ: ಚನ್ನಪಟ್ಟಣ ಕ್ಷೇತ್ರಕ್ಕೆ ೩೦೦ ಕೋಟಿ ರೂ. ಹಣ ಮಂಜೂರಾತಿ ಮಾಡಿಸಿದ್ದೇನೆ. ಚನ್ನಪಟ್ಟಣ ಕ್ಷೇತ್ರಕ್ಕೆ ಹೊಸ ರೂಪ ಕೊಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
೨೦ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಕಳಿಯಲ್ಲಿ ಮನೆಗಳ ಅನುದಾನಕ್ಕೆ ೨.೧೬ ಕೋಟಿ ರೂ. ಹಣ ನೀಡಿದ್ದೇನೆ ಎಂದಿದ್ದಾರೆ.
ಸಿಎಸ್ ಆರ್ ಫಂಡ್ ನಿಂದ ಒಂದು ಒಳ್ಳೆಯ ಶಾಲೆ ಕಟ್ಟಿದ್ದೇನೆ. ಇನ್ನೂ ಕೆಲಸ ಮಾಡುವುದಕ್ಕೆ ಹೆಚ್ಚು ಶಕ್ತಿ ಕೊಡಬೇಕು. ನಾನು ನಿಮ್ಮ ಉಸ್ತುವಾರಿ ಸಚಿವ ೨೦ ಸಲ ಕ್ಷೇತ್ರಕ್ಕೆ ಬಂದಿದ್ದೇನೆ. ನಿಮ್ಮ ಕ್ಷೇತ್ರದ ಶಾಸಕರು ೨೦ ಸಲ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಮಧ್ಯೆ ಕೆರೆ ಎಲ್ಲಾ ಖಾಲಿ ಇದೆ ಎಂದು ಗ್ರಾಮಸ್ಥ ಕೂಗಿದ್ದು, ಆಯ್ತು ಮಾಡಿಸುತ್ತೇವೆ. ಅದನ್ನು ಮಾಡಬೇಕಾಗಿರುವವರು ಕಾಂಗ್ರೆಸ್ನವರು ಮಾತ್ರ, ಬಿಜೆಪಿ, ದಳದಿಂದ ಆಗಲ್ಲ ಎಂದು ಕಿಡಿಕಾರಿದ್ದಾರೆ.