ಮಂಡ್ಯ: ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ. ನಾನು ಎಲ್ಲಿಯೂ ಈ ಬಗ್ಗೆ ಹೇಳಿಲ್ಲ. ಚುನಾವಣೆಗೂ ಮೊದಲು ಇದೇರೀತಿ ಅಪಪ್ರಚಾರ ಆಯ್ತು. ಈಗಲೂ ಅದೇರೀತಿಯ ಕೆಲಸ ಆಗ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದರು.
ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ವಿಚಾರವಾಗಿ ಮಾತನಾಡಿ, ನಾನು ಮೋದಿಯವರ ನೇತೃತ್ವದ ಬಿಜೆಪಿಯಲ್ಲೇ ಇರ್ತಿನಿ ಎಂದು ತಿಳಿಸಿದರು.
ಕಳೆದ ಒಂದುವರೆ ತಿಂಗಳು ಬಾಂಬೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಇಂದು ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಬೇಡ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು.