ಮೈಸೂರು : ಜನರು, ಚಾಮುಂಡಿದೇವಿ ಆಶೀರ್ವಾದದಿಂದ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನರು, ಚಾಮುಂಡಿದೇವಿ ಆಶೀರ್ವಾದದಿಂದ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ನಾನು ರಾಜಕಾರಣದಲ್ಲಿ ಇಷ್ಟು ದಿನ ಇರುತ್ತೀರಲಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ನೀಡಲ್ಲ. ಜನರ ಶೀರ್ವಾದ ಇರುವವರಗೂ ನನ್ನನ್ನು ಏನೂ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡರು ಮುಡಾ ಸದಸ್ಯರಾಗಿದ್ದಾರೆ. ಅವರಿಗೆ ಸತ್ಯ ಗೊತ್ತಿದೆ. ಹೀಗಾಗಿ ಸತ್ಯವಾಗಿ ಮಾತನಾಡಿದ್ದಾರೆ ಎಂದರು.
ನಾಡಿನ ಜನತೆಗೆ `ನಾಡಹಬ್ಬ ದಸರಾ ಮಹೋತ್ಸವ?ಕ್ಕೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ: ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ನಾಡಹಬ್ಬ ದಸರಾಗೆ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನು ಮೇಳೈಸಿಕೊಂಡು ಆಚರಿಸಲಾಗುವ ಮೈಸೂರು ದಸರಾ ನಮ್ಮ ನಿಜವಾದ ನಾಡಹಬ್ಬ. ಈ ಹಬ್ಬ ಅಸತ್ಯ, ಅನ್ಯಾಯ, ದ್ವೇಷ, ಮೋಸಗಳ ಕೆಡುಕತನದ ವಿರುದ್ಧ ಸಾಧಿಸಿದ್ದ ವಿಜಯದ ಸಂಕೇತವೂ ಹೌದು. ಈ ಬಾರಿ ಪ್ರಕೃತಿ ದೇವತೆ ಒಲಿದು ಹರಸಿದ್ದರ ಫಲವಾಗಿ ಇಳೆ ತುಂಬಾ ಸಮೃದ್ಧ ಮಳೆಯಾಗಿ, ಬೆಳೆಯಾಗಿ ನಾಡಿನಾದ್ಯಂತ ಹರ್ಷದ ಹೊನಲು ಹರಿದಿದೆ.ಈ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಈ ಬಾರಿ ಸಕಲ ಸಂಪ್ರದಾಯಗಳನ್ನು ಮೇಳೈಸಿಕೊಂಡು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನು ಮೇಳೈಸಿಕೊಂಡು ಆಚರಿಸಲಾಗುವ ಮೈಸೂರು ದಸರಾ ನಮ್ಮ ನಿಜವಾದ ನಾಡಹಬ್ಬ. ಈ ಹಬ್ಬ ಅಸತ್ಯ, ಅನ್ಯಾಯ, ದ್ವೇಷ, ಮೋಸಗಳ ಕೆಡುಕತನದ ವಿರುದ್ಧ ಸಾಧಿಸಿದ್ದ ವಿಜಯದ ಸಂಕೇತವೂ ನಾಡಹಬ್ಬದ ಸಂಭ್ರಮಾಚರಣೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಹಬ್ಬದ ವೈಭವವನ್ನು ಕಣ್ಣುಂಬಿಕೊಳ್ಳಲು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು ಎಂದು ಶುಭ ಹಾರೈಸಿದ್ದಾರೆ.