ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ತೂಗುದೀಪ್ ಪ್ರಕರಣದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈಗ ನಟಿ ಭಾವನಾ ರಾಮಣ್ಣ ಅವರು ದರ್ಶನ್ ತೂಗುದೀಪ ಪರ ಮಾತನಾಡಿದ್ದಾರೆ. ‘ಯಾವುದೇ ಹೆಣ್ಣಾದರೂ ಅವರಿಗೆ ಮನೆ ಇರುತ್ತದೆ, ಮನಸ್ಸು ಇರುತ್ತದೆ. 19 ವರ್ಷದ ಹುಡುಗಿಗೆ ಈ ರೀತಿ ಮೆಸೇಜ್ ಬಂದಿದ್ದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳಬಹುದು.
ಘೋರ ಕೃತ್ಯ ನಡೆದ ಬಳಿಕ ಅದರ ಬಗ್ಗೆ ಚರ್ಚೆ ನಡೆಸಬಹುದು ಅಷ್ಟೇ, ಆದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯರು ಎಮೋಷನಲ್ ಪರ್ಸನಲ್. ದರ್ಶನ್ ಜೊತೆ ಹಲವು ಸಿನಿಮಾ ಮಾಡಿದ್ದೇನೆ. ಫ್ರೆಂಡ್ಲಿ ಆಗಿ ನಾವು ಸಾಕಷ್ಟು ಬಾರಿ ಸೇರಿದ್ದೇವೆ. ನಾನು ದರ್ಶನ್ ಪರವಾಗಿ ನಿಲ್ಲುತ್ತೇನೆ. ಸಂತೋಷದಲ್ಲಿ ಭಾಗಿ ಆಗಿ ದುಃಖದಲ್ಲಿ ಭಾಗಿ ಆಗಿಲ್ಲ ಎಂದರೆ ತಪ್ಪಾಗುತ್ತದೆ’ ಎಂದಿದ್ದಾರೆ ನಟಿ ಭಾವನಾ ರಾಮಣ್ಣ.