Monday, December 29, 2025
Google search engine

Homeವಿದೇಶರಷ್ಯಾ ಹಾಗೂ ಉಕ್ರೇನ್‌ ಯುದ್ಧವನ್ನು ಸದ್ಯದಲ್ಲಿಯೇ ನಿಲ್ಲಿಸುತ್ತೇನೆ : ಟ್ರಂಪ್‌

ರಷ್ಯಾ ಹಾಗೂ ಉಕ್ರೇನ್‌ ಯುದ್ಧವನ್ನು ಸದ್ಯದಲ್ಲಿಯೇ ನಿಲ್ಲಿಸುತ್ತೇನೆ : ಟ್ರಂಪ್‌

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಫ್ಲೋರಿಡಾದ ಮಾರ್-ಎ-ಲಾಗೊ ನಿವಾಸದಲ್ಲಿ ನಡೆದ ಬಳಿಕ ರಷ್ಯಾ ಹಾಗೂ ಉಕ್ರೇನ್‌ ಯುದ್ಧವನ್ನು ಸದ್ಯದಲ್ಲಿಯೇ ನಿಲ್ಲಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಶಾಂತಿ ಮಾತುಕತೆಗಳು ಹಿಂದಿಗಿಂತಲೂ ಹತ್ತಿರದಲ್ಲಿವೆ ಎಂದು ಅವರು ಹೇಳಿದ್ದು, ಫೆಬ್ರವರಿ 2022 ರಿಂದ ಹತ್ತಾರು ಸಾವಿರ ಜನರನ್ನು ಬಲಿತೆಗೆದುಕೊಂಡಿರುವ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವೇ ಎಂಬುದು ಸದ್ಯದಲ್ಲೇ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಾವು ಎರಡೂ ಕಡೆಯವರೊಂದಿಗೆ ಬಹಳ ಹತ್ತಿರವಾಗಿದ್ದೇವೆ. ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ 95% ಪೂರ್ಣಗೊಂಡಿದೆ. ಎರಡೂ ಕಡೆಯವರು ಆ ಯುದ್ಧವನ್ನು ಕೊನೆಗೊಳಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.

ಝೆಲೆನ್ಸ್ಕಿ ಜೊತೆ ಸಭೆ ನಡೆಸುವ ಮೊದಲು ಟ್ರಂಪ್‌ ಪುಟಿನ್‌ಗೆ ದೂರವಾಣಿ ಕರೆ ಮಾಡಿ ಯುದ್ಧ ಕೊನೆಗೊಳಿಸುವ ಸಂಬಂಧ ಮಾತನಾಡಿದ್ದರು. ಈ ವೇಳೆ ಯುದ್ಧ ಮುಗಿಸುವ ಸಂಬಂಧ ಟ್ರಂಪ್‌ ಉಕ್ರೇನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ.

ಇನ್ನೂ ಉಕ್ರೇನ್ ಯಶಸ್ವಿಯಾಗುವುದನ್ನು ರಷ್ಯಾ ಬಯಸುತ್ತದೆ. ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಉಕ್ರೇನ್‌ ಬಗ್ಗೆ ತುಂಬಾ ಉದಾರ ಮನೋಭಾವನೆ ಹೊಂದಿದ್ದಾರೆ ಎಂದು ಟ್ರಂಪ್‌ ಅಚ್ಚರಿಯ ಹೇಳಿಕೆಯನ್ನು ನೀಡಿದರು.

ಕದನ ವಿರಾಮ ಒಪ್ಪಂದ ಕುರಿತು ಅವರೊಂದಿಗೆ ನಾನು ಮಾತನಾಡಿದಾಗಲೆಲ್ಲಾ, ಪುಟಿನ್‌ ಅವರು ಉಕ್ರೇನ್‌ ಬಗ್ಗೆ ಹೊಂದಿರುವ ಭಾವನೆ ನನ್ನ ಮನಸ್ಸನ್ನು ತಟ್ಟಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ರಷ್ಯಾ-ಉಕ್ರೇನ್‌ ಶಾಂತಿ ಸ್ಥಾಪನೆ ಕುರಿತು ಮಾತನಾಡಲು, ಈ ಹಿಂದೆ ಶ್ವೇತಭವನದಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ವೊಲೊಡಿಮಿರ್‌ ಝೆಲೆನ್ಸ್ಕಿ ಭೇಟಿಯಾಗಿದ್ದರು. ಈ ವೇಳೆ ಟ್ರಂಪ್-ಝೆಲೆನ್ಸ್ಕಿ ಜಗಳ ಇಡೀ ಜಗತ್ತಿನ ಗಮನ ಸೆಳೆದಿತ್ತು. ಉಕ್ರೇನ್‌ ಅಧ್ಯಕ್ಷರಿಗೆ ಯುದ್ಧ ಕೊನೆಯಾಗುವುದು ಬೇಕಿಲ್ಲ ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

RELATED ARTICLES
- Advertisment -
Google search engine

Most Popular