Sunday, April 20, 2025
Google search engine

Homeರಾಜ್ಯಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ : ಡಿಕೆ ಸುರೇಶ್

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ : ಡಿಕೆ ಸುರೇಶ್

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಮಾಜಿ ಸಂಸದ ಡಿಕೆ ಸುರೇಶ್ ಈ ಬಾರಿ ಬಿಜೆಪಿ ಅಭ್ಯರ್ಥಿ ಸಿಎನ್ ಮಂಜುನಾಥ್ ವಿರುದ್ಧ ಭಾರಿ ಅಂತರದಿಂದ ಸೋಲು ಅನುಭವಿಸಿದ್ದಾರೆ ಇದೀಗ ಚನ್ನಪಟ್ಟಣ ಉಪಚುನಾವಣೆ ಕುರಿತು ಮಾತನಾಡಿದ್ದು ನಾನು ಈ ಚುನಾವಣೆಯಲ್ಲಿ ಕೇವಲ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಜನ ಯಾರನ್ನು ಬಯಸುತ್ತಾರೆ ಅವರೇ ಅಭ್ಯರ್ಥಿ. ರಾಮನಗರ ನಮ್ಮ ಜಿಲ್ಲೆ ಪಕ್ಷದ ಅಧ್ಯಕ್ಷ ಡಿಸಿಎಂ ಆಗಿ ಡಿಕೆಗೆ ಜವಾಬ್ದಾರಿ ಇದೆ. ಉಪಚುನಾವಣೆ ಬರುವುದರಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಿಲ್ಲ. ಹಾಗಾಗಿ ಕಾರ್ಯಕರ್ತರು ಸಾಕಷ್ಟು ಇದ್ದಾರೆ ಹಾಗಾಗಿ ಡಿಕೆ ಶಿವಕುಮಾರ್ ಚೆನ್ನಪಟ್ಟಣಕ್ಕೆ ಭೇಟಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಬೇರೆಯವರು ಕೆಲಸ ಮಾಡಲಿ ನಾವು ಸಹಕಾರ ಕೊಡೋಣ ಮೊದಲಿಂದಲೂ ಚನ್ನಪಟ್ಟಣ ಕ್ಷೇತ್ರ ಜೊತೆ ಒಡನಾಟವಿದೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲವಾಗಿದೆ ನಾಯಕತ್ವ ಇರಲಿಲ್ಲ ನಮ್ಮ ಪಕ್ಷಕ್ಕೆ ಬರೋದು ಹೋಗುವುದರಿಂದ ನಮಗೆ ಹಿನ್ನಡೆಯಾಗಿತ್ತು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ ಹೇಳಿಕೆ ನೀಡಿದರು.

RELATED ARTICLES
- Advertisment -
Google search engine

Most Popular