ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಮುದಾಯದಲ್ಲಿ ನೊಂದವರ ಪರವಾಗಿ ಕೆಲಸ ಮಾಡಿ ಒಕ್ಕಲಿಗ ಸಮದಾಯದ ಸಂಘಟನೆಗೆ ಮತ್ತು ಏಳಿಗೆಗಾಗಿ ಶ್ರಮಿಸುವುದಾಗಿ ಕೆ.ಆರ್.ನಗರ-ಸಾಲಿಗ್ರಾಮ ತಾಲೂಕು ಒಕ್ಕಲಿಗರ ಸಂಘದ ನೂತನ ಉಪಾಧ್ಯಕ್ಷ ಹೊಸೂರು.ಎ.ಕುಚೇಲ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಯುವ ಮುಖಂಡ ಜಯಶಂಕರ್ ಕೋಟಿ ಅಭಿಮಾನಿ ಬಳಗದ ವತಿಯಿಂದ ತಮಗೆ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ನಂತರ ಅವರು ಮಾತನಾಡಿದರು
ಈ ಎರಡು ತಾಲೂಕಿನಲ್ಲಿ ಒಕ್ಕಲಿಗರ ಸಮುದಾಯದ ಸಂಘಟನೆಯ ಕೊರತೆ ಎದ್ದು ಕಾಣುತ್ತಿದ್ದು ಸಂಘದ ನೂತನ ಅಧ್ಯಕ್ಷ ಶಿವರಾಮ್ ಅವರ ನೇತೃತ್ವದಲ್ಲಿ ಸಮುದಾಯವನ್ನು ಸಂಘಟನೆ ಮಾಡಿಲು ತಾವು ಶ್ರಮಿಸಲಿದ್ದು ತಮ್ಮನ್ನು ಉಪಾಧ್ಯಕ್ಷರನ್ನಾಗಿ ಮಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಎರಡು ತಾಲೂಕಿನಿಂದ ಬೇರೆ ಭಾಗಗಳಲ್ಲಿರುವ ಸಮಾಜದ ಜನರನ್ನು ಒಗ್ಗೂಡಿಸಿ ಸಂಘದ ಸದಸ್ಯರುಗಳನ್ನಾಗಿ ಮಾಡಿಸುವ ಕೆಲಸವನ್ನು ಮಾಡಲಾಗುವುದು, ಜತಗೆ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ, ಅಧಿಕಾರಿಗಳ ರಕ್ಷಣೆಗೂ ಸಂಘವು ಶ್ರಮಿಸಲಿದ್ದು ಇದ್ದಕ್ಕೆ ಸಮಾಜದ ಎಲ್ಲಾ ಸರ್ವರೂ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಳಿಯೂರು ಬಡಾವಣೆ ಡೈರಿ ಉಪಾಧ್ಯಕ್ಷ ಎಚ್.ಕೆ.ವಿಕ್ರಮ್ ಗೌಡ, ನಿರ್ದೇಶಕ ಅಜಯ್ ಬೀರು, ಹೊಸೂರು ಮೂತ್ತೂಟ್ ಪಿನ್ ಕ್ರಾಪ್ ವ್ಯವಸ್ಥಾಪಕ ಎಚ್.ಜೆ.ಜಯಶಂಕರ್ ಕೋಟಿ, ಹೊಸೂರು ಚೆಸ್ಕಾಂನ ಜಿ.ವಿ.ಪಿ.ಎಚ್.ಎ.ಮಹೇಶ್ ಆಟಾನಿ, ಪೆಟ್ರೋಲ್ ಉದ್ಯಮಿ ಸಾಲೇಕೊಪ್ಪಲು ಚಂದನ್ ಸೇರಿದಂತೆ ಬಳಗದ ಇನ್ನಿತರರು ಹಾಜರಿದ್ದರು