Tuesday, January 27, 2026
Google search engine

Homeರಾಜ್ಯಸುದ್ದಿಜಾಲಅಭಿವೃದ್ಧಿಗಾಗಿ ಕಂಕಣ ಬದ್ಧರಾಗಿ ಕೆಲಸ ಮಾಡುತ್ತೇನೆ : ಶಾಸಕ ಡಾ.ಅಜಯ್ ಸಿಂಗ್

ಅಭಿವೃದ್ಧಿಗಾಗಿ ಕಂಕಣ ಬದ್ಧರಾಗಿ ಕೆಲಸ ಮಾಡುತ್ತೇನೆ : ಶಾಸಕ ಡಾ.ಅಜಯ್ ಸಿಂಗ್

ಜೇವರ್ಗಿ: ತಾಲೂಕಿನ ಸಂಪೂರ್ಣ ಅಭಿವೃದ್ಧಿಗಾಗಿ ಕಂಕಣ ಬದ್ಧರಾಗಿ ಕೆಲಸ ಮಾಡುತ್ತೇನೆ ಜನರು ನಮ್ಮ ಮೇಲೆ ಇಟ್ಟ ಪ್ರೀತಿ ವಿಶ್ವಾಸಕ್ಕೆ ಸದಾ ಋಣಿ ಯಾಗುತ್ತೇನೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಹೇಳಿದರು.

ಪಟ್ಟಣದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ೭೭ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತ ರತ್ನ ಸವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಇಂದು ಜಾರಿಗೆ ಬಂದ ದಿನ ಸಂತಸ ಸಡಗರದಿಂದ ಆಚರಣೆ ಮಾಡುತ್ತೇವೆಂದರೆಲ್ಲದೆ ದೇಶ ವಿದೇಶದಲ್ಲಿ ಭಾರತೀಯರು ಭಾರತ ರತ್ನ ಅಂಬೇಡ್ಕರ್ ಅವರ ಹೆಸರು ಅಜರಾಮರ ಅವರ ಸಂವಿಧಾನ ಆಸೆಗಳು ನಾವೆಲ್ಲ ಈಡೇರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಶೌಕತ ಅಲಿ, ಆಲೂರು ಪಿ ಕಾರ್ಡ್ ಅಧ್ಯಕ್ಷ ಪ್ರತಾಪ್ ಕಟ್ಟಿ, ಟಿ.ಎ.ಎಮ್.ಸಿ ಅಧ್ಯಕ್ಷ ಭಗವಂತ ರಾಯ್ ಗೌಡ ಅಂಕಲಗಿ, ಮಲ್ಲಣ್ಣ ಯಲಗೋಡ ವಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿಚಂದ್ರನ್ ಲಕ್ಕುಂಡಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ಸಂಗನವರ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ, ಆಹಾರ ನಿರೀಕ್ಷಕ ಅನಿತಾ ಹಿಂದುಳಿದ ವರ್ಗ ಅಧಿಕಾರಿ ಹಾಗೂ ಅಲ್ಪಸಂಖ್ಯಾತರ ಅಧಿಕಾರಿ ಹುಲಿಕೆಂಟರಾಯ, ಎಪಿಎಂಸಿ ಕಾರ್ಯದರ್ಶಿ ಸುಮಂಗಳ ಹೂಗಾರ್, ಕ್ರೀಡಾ ವ್ಯವಸ್ಥಾಪಕ ಸಂಗಮೇಶ್ ಕೋಂಬಿನ್, ದಲಿತ ಮುಖಂಡರಾದ ಭೀಮರಾಯನಗನೂರು ಶ್ರೀಹರಿ, ಕರ್ಕಳಿ ರವಿ, ಕುಳಗೇರಿ ಸಿದ್ದರಾಮಕಟ್ಟಿ, ಸಂಗಣ್ಣ, ಶಿವಕುಮಾರ್, ಚಂದ್ರಶೇಖರ್ ಗೌಡಪ್ಪ ಗೌಡ, ತಾಲೂಕು ವೈದ್ಯಾಧಿಕಾರಿ ಉಮೇಶ್ ಶರ್ಮ ಪಿಎಸ್‌ಐ ಗಜಾನನ್ ಬಿರೆದರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular