Tuesday, August 26, 2025
Google search engine

Homeಅಪರಾಧಕಾನೂನುಸರ್ಕಾರಿ ನೌಕರ, ಪತ್ನಿ ಇಬ್ಬರು ಮೃತಪಟ್ಟಲ್ಲಿ, ಸಹೋದರಿಗೆ ಉದ್ಯೋಗ ಹಕ್ಕು: ಹೈಕೋರ್ಟ್ ತೀರ್ಪು

ಸರ್ಕಾರಿ ನೌಕರ, ಪತ್ನಿ ಇಬ್ಬರು ಮೃತಪಟ್ಟಲ್ಲಿ, ಸಹೋದರಿಗೆ ಉದ್ಯೋಗ ಹಕ್ಕು: ಹೈಕೋರ್ಟ್ ತೀರ್ಪು

ಬೆಂಗಳೂರು: ಸರ್ಕಾರಿ ನೌಕರನ ಪತ್ನಿ ಆತನಗಿಂತಲೂ ಮೊದಲೇ ನಿಧನರಾಗಿ ಆಕೆಗೆ ಮಕ್ಕಳಿಲ್ಲವಾದರೆ ಅಂತಹ ಪ್ರಕರಣಗಳಲ್ಲಿ ನೌಕರನ ಸಹೋದರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಹಕ್ಕಿರಲಿದೆ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿದೆ.

ವಿಜಯಪುರದ ಮುದ್ದೇಬಿಹಾಳದ ಅರಸನಾಳ ಗ್ರಾಮದ ಮೃತ ಉದ್ಯೋಗಿ ವೀರೇಶ್ ಮಂಟಪ್ಪ ಲೋಳಸರ ಅವರ ತಾಯಿ ಮಾಂತವ್ವ ಹಾಗೂ ಸಹೋದರ ಸಂಗಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

ವೀರೇಶ್ ಮಂಟಪ್ಪ ಲೋಳಸರ ಅಧಿವರ ಪತ್ನಿ ಸುನಂದಾ 2022ರ ಏಪ್ರಿಲ್ 9ರಂದು ನಿಧನರಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ ಮತ್ತು ವೀರೇಶ್ ತಮ್ಮ ತಾಯಿ ಮತ್ತು ಸಹೋದರನನ್ನು ನೋಡಿಕೊಳ್ಳುತ್ತಿದ್ದರು. ಆದ್ದರಿಂದ, ತಾಯಿಯನ್ನು ನೋಡಿಕೊಳ್ಳುತ್ತಿರುವ ಅವರ ಸಹೋದರನಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಒದಗಿಸುವುದು ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಹೇಳಿದೆ.

RELATED ARTICLES
- Advertisment -
Google search engine

Most Popular