ಬೆಂಗಳೂರು: ರಾಜ್ಯದಲ್ಲಿ ಯೂರಿಯಾ ಕೊರತೆಯಾಗದಂತೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಅವರು ಯೂರಿಯಾ ಕೊರತೆಯ ಬಗ್ಗೆ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ಕುರಿತು ಕಿಡಿಕಾರಿದರು.
“ಬಿಜೆಪಿಯವರು ಧೈರ್ಯವಿದ್ದರೆ ಕೇಂದ್ರ ಸರ್ಕಾರದಿಂದ ಯೂರಿಯಾ ಕೊಡಿಸಲಿ. ಪ್ರತಿಪಕ್ಷದಲ್ಲಿರುವವರಾಗಿ ಕೇಂದ್ರದ ಬಳಿ ಮಾತನಾಡೋ ಧಮ್ಮು ಇವರಿಗೆ ಇಲ್ಲ. ನಾವು ಎಲ್ಲಾ ಎಂಪಿಗಳು ಮತ್ತು ಕೇಂದ್ರ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. . ಸಿಎಂ ಅವರು ಕೂಡ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಕೇಂದ್ರವೇ ಯೂರಿಯಾ ಒದಗಿಸುತ್ತಿದೆ. ಆದ್ದರಿಂದ ಈ ಬಗ್ಗೆ ರಾಜಕೀಯ ಮಾಡುವುದು ಸರಿ ಅಲ್ಲ ಎಂದ ಅವರು, “ಇದು ರೈತರ ಸಮಸ್ಯೆ. ಇದರಲ್ಲಿ ರಾಜಕೀಯ ಮಾಡಬೇಡಿ. ಕೊಪ್ಪಳ ಸೇರಿದಂತೆ ಕೆಲವು ಭಾಗಗಳಲ್ಲಿ ಸಮಸ್ಯೆ ಇದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಹಾರ ಕ್ರಮ ತೆಗೆದುಕೊಳ್ಳಲಾಗಿದೆ,” ಎಂದು ವಿವರಿಸಿದರು.
ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುತ್ತಿದೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, “ಅದಕ್ಕೆ ದೃಢ ಸಾಕ್ಷಿ ಬೇಕು. ರಾಜ್ಯದಲ್ಲಿ ಸಾವಿರಾರು ರೀಟೈಲ್ ಸೆಂಟರ್‌ಗಳಿವೆ. ಎಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದರು.
ವಿಜಯೇಂದ್ರ ಯೂರಿಯಾ ವಿತರಣೆಯ ಬಗ್ಗೆ ಟೀಕೆ ಮಾಡಿದ್ದಕ್ಕೆ ತಿರುಗೇಟು ನೀಡಿದ ಅವರು, “ಎಂಟು ಮೆಟ್ರಿಕ್ ಟನ್ ಯೂರಿಯಾ ಬಂದಿದೆ, ಅದರಲ್ಲಿ ಆರು ಮೆಟ್ರಿಕ್ ಟನ್ ವಿತರಿಸಲಾಗಿದೆ. ಉಳಿದವು ಕೂಡ ಬರುವ ಹಂತದಲ್ಲಿವೆ. ಹಳೆಯ ಸ್ಟಾಕ್‌ಗಳ ಬಗೆಗೆ ಮಾಹಿತಿ ಇಲ್ಲದವರು ಆರೋಪಿಸುತ್ತಿದ್ದಾರೆ,” ಎಂದರು.
“ವಿಜಯೇಂದ್ರಗೆ ಬುದ್ಧಿ ಇದೆಯಾ? ಪಾಪ ಅವರಿಗೆ ಅನುಭವದ ಕೊರತೆಯಿದೆ. ಅಶೋಕ್‌ಣ್ಣನಿಗೆ ತಿಳಿದಿದೆಯಾದರೂ ರಾಜಕೀಯ ಮಾಡ್ತಿದ್ದಾರೆ. ಧೈರ್ಯವಿದ್ರೆ ಯೂರಿಯಾವನ್ನ ಕೊಡಿಸಲಿ, ಕೇಂದ್ರದ ಮೇಲೆ ಒತ್ತಡ ಹಾಕಲಿ,” ಎಂದು ಸವಾಲು ಹಾಕಿದರು.