Saturday, April 19, 2025
Google search engine

Homeಸ್ಥಳೀಯಚಾಮುಂಡೇಶ್ವರಿ ನಾಡದೇವತೆಯಾದರೆ ಮಹಿಷಾಸುರ ನಾಡದೇವರಲ್ಲವೆ?

ಚಾಮುಂಡೇಶ್ವರಿ ನಾಡದೇವತೆಯಾದರೆ ಮಹಿಷಾಸುರ ನಾಡದೇವರಲ್ಲವೆ?

ಮೈಸೂರು:ಚಾಮುಂಡೇಶ್ವರಿ ನಾಡದೇವತೆಯಾದರೆ ಮಹಿಷಾಸುರಯಾಕೇ ನಾಡದೇವರಲ್ಲ? ಎಂದು ಸಂಸ್ಕೃತಿಚಿಂತಕಡಾ.ಬಂಜಗೆರೆಜಯಪ್ರಕಾಶ್ ಪ್ರಶ್ನಿಸಿದರು. ಮೈಸೂರು ವಿವಿ ಡಾ.ಬಾಬೂ ಜಗಜೀವನರಾಮ್‌ಅಧ್ಯಯನ, ಸಂಶೋಧನ ಮತ್ತು ವಿಸ್ತರಣಕೇಂದ್ರ ಮತ್ತು ಮಾತಂಗ ನೌಕರರಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಶನಿವಾರರಾಣಿ ಬಹದ್ದೂರ ಸಭಾಂಗಣದಲ್ಲಿ ಏರ್ಪಡಿಸಿದ್ದ ದಲಿತಅರಸರ ಸಾಂಸ್ಕೃತಿಕ ನೋಟ, ಅರಸುಕುರನ್ಗರಾಯನ ಸಂಸ್ಕೃತಿ ಮತ್ತುಚಾರಿತ್ರಿಕ ನೆಲೆಗಳು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಚಾಮುಂಡೇಶ್ವರಿಜನದೇವತೆ. ಶಾಕ್ತ ಪರಂಪರೆಯವಳು. ವೈದಿಕ ದೇವತೆಯಲ್ಲ. ಜನಾನುರಾಗಿಯಾಗಿದ್ದ ಮಹಿಷಾಸುರನನ್ನು ಸೋಲಿಸಿ ರಾಜ್ಯವನ್ನುತನ್ನಅಧೀನಕ್ಕೆ ತೆಗೆದುಕೊಂಡಳು. ವೈದಿಕರಿಗೆ ನೆರವಾದಳೆಂಬ ಕಾರಣಕ್ಕೆ ಮೆರೆಸಲಾಗುತ್ತಿದೆಎಂದು ಹೇಳಿದರು. ಆರ್ಯ ಸಂಸ್ಕೃತಿಯಲ್ಲಿ ಮಹಿಳಾ ದೇವತೆ ಪೂಜಿಸುವುದಿಲ್ಲ. ಕಾಲಾಂತರದಲ್ಲಿ ಸಂಕರಗೊಂಡ ಮೇಲೆ ಪೂಜಿಸಲಾರಂಭಿಸಿದರು. ಸ್ಥಳೀಯ ದೇವತೆ ನಾಡದೇವತೆಯಾಗುವುದಾದರೆಅರಸನಾಗಿಜನಾನುರಾಗಿದ್ದ ಮಹಿಷಾಸುರ ನಾಡದೇವನುಯಾಕಾಗುವುದಿಲ್ಲ ಎಂದು ಪ್ರಶ್ನಿಸಿದರು.

ಪ್ರಾಚೀನ ಪುರಾಣದಲ್ಲಿ ಮಹಿಷಾ ಮಂಡಲದಉಲ್ಲೇಖವಿದೆ. ಚಾಮುಂಡಿಬೆಟ್ಟದಲ್ಲಿ ಮಹಿಷನ ಪ್ರತಿಮೆಇದೆ. ಅವನನ್ನುಯಾಕೆ ದುರುಳನನ್ನಾಗಿ ಚಿತ್ರಿಸಲಾಗಿದೆ? ಬಲಿ ಮಹಾರಾಜ ಮಹಾತ್ಯಾಗಿ, ಜನಾನುರಾಗಿ. ಆದರೆ, ಅವನ ಬಲಿ ಪಡೆದ ದಿನವನ್ನು ಬಲಿಪಾಡ್ಯಮಿಯನ್ನಾಗಿಅಚರಿಸಲಾಗುತ್ತಿದೆ. ಕೀರ್ತಿವಂತರಾದವನ್ನುತಮ್ಮ ಹಿತಾಸಕ್ತಿಗಾಗಿಚರಿತ್ರೆಯಲ್ಲಿ ಖಳರನ್ನಾಗಿ ಚಿತ್ರಿಸಲಾಗಿದೆಎಂದರು. ಮಹಿಷಾಸುರ, ಬಲಿಚಕ್ರವರ್ತಿಯನ್ನುಜನ ಮರೆತಿಲ್ಲ. ಅವರದು ಮರೆಮಾಚಲ್ಪಟ್ಟಇತಿಹಾಸ. ಶಾಸ್ತ್ರಿಯ ಗ್ರಂಥಗಳು, ಕೃತಿಗಳಿಗೆ ಇವರು ಲೆಕ್ಕ ಇರುವುದಿಲ್ಲ. ಮಹಾತ್ಮರಚರಿತ್ರೆಯನ್ನುತಿದ್ದಿ ಬರೆಯಲಾಯಿತು. ಕೊಡುಗೆಕೊಟ್ಟವರು ಹೆಸರುಇಲ್ಲವೇಇಲ್ಲ. ಇದುಜಾತಿ ಮತ್ತು ಸಾಂಸ್ಕೃತಿಕರಾಜಕಾರಣಎಂದು ಹೇಳಿದರು. ಕನ್ನಡಉಪನ್ಯಾಸಕಡಾ.ರವಿಕುಮಾರ್ ನೀಹ ಸಂಪಾದಿಸಿರುವ ದಲಿತಅರಸಕುರನ್ಗರಾಯನಚಾರಿತ್ರಿಕ ನೆಲೆಗಳು ಪುಸ್ತಕವೂ ಸಾಮಾಜಿಕ ಮತ್ತುತಾತ್ವಿಕ ಆಯಾಮಗಳಿಂದ ನಮಗೇ ಮುಖ್ಯವಾಗುತ್ತದೆ.

ದಲಿತರು ಜೀತದಾಳುಗಳಾಗಿ ಸೇನೆಯಲ್ಲಿ ಕಾಲಾಳುಗಳಾಗಿ ಪಶುಪಾಲಕರಾಗಿ ಮಾತ್ರವಲ್ಲದೇ ಆಳ್ವಿಕೆಯನ್ನು ಮಾಡಿದ್ದಾರೆ. ಆ ಮೂಲಕ ಕರ್ನಾಟಕಕ್ಕೆಕೊಡುಗೆಕೊಟ್ಟಿದ್ದಾರೆಎಂಬುದನ್ನುಅರಿಯಬಹುದಾಗಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ೧೬-೧೭ನೇ ಶತಮಾನದಲ್ಲಿ ಸ್ಥಾನಿಕ ಪಾಳೇಗಾರರು ಕೃಷಿಗೆ, ಪಶು ಸಂಗೋಪನೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಅದರಿಂದಲೇ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗಿದೆ. ಆದರೆ, ಇದನ್ನುಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ದಲಿತ ಸಮುದಾಯದ ವ್ಯಕ್ತಿ ಆಳ್ವಿಕೆ ಮಾಡಿದ್ದಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲಎಂದರು. ಸಾಂಸ್ಕೃತಿಕ ಸಂಕೋಲೆಗಳನ್ನು ಬಿಡಿಸಿಕೊಳ್ಳುವುದೇ ಅಧ್ಯಯಕಾರರ ಸವಾಲು. ಚರಿತ್ರೆಯನ್ನು ಮೇಲುಖವಾಗಿ ನೋಡಲಾಗಿದೆ. ಆದರೆ, ಚರಿತ್ರೆ ನಡೆದಿರುವುದು ನೆಲಮಟ್ಟದಲ್ಲಿ, ಅದನ್ನುಕಟ್ಟಿದವರು ತಳಸ್ತರದ ಜನರು. ಈ ಪರಂಪರೆಯಲ್ಲಿಅಜ್ಞಾತರದೊಡ್ಡಚರಿತ್ರೆಯಇದೇ. ಅದನ್ನು ಹುಡುಕಲು ಈ ಕೃತಿಯೂ ಪ್ರೇರಣೆಯಾಗಲಿದೆಎಂದು ಹೇಳಿದರು.

ಕುರನ್ಗರಾಯನಇತಿಹಾಸಕರ್ನಾಟಕದ ಸಾಂಸ್ಕೃತಿಕ, ಜಾತಿರಾಜಕಾರಣದಗ್ರಹಿಕೆಯ ನೆಲೆಗಳನ್ನು ಬದಲಿಸುವ ಪುಸ್ತಕವಾಗಿದೆ. ಇದುಗ್ರಂಥಾಲಯದಲ್ಲಿ ಕುಳಿತು ಬರೆದ ಪುಸಕ್ತವಲ್ಲ. ಐತಿಹ್ಯಗಳ ದಾಖಲೆಗಳಿಂದ ಬರೆದಿರುವುದು. ಲಿಖಿತದಾಖಲೆ ಮೋಸ ಮಾಡಿದಾಗಜನರ ಸತಿ ನಮಗೇ ಮುಖ್ಯವಾಗುತ್ತದೆ. ಮರೆತಇತಿಹಾಸಕಟ್ಟಲು ಸಹಾಯವಾಗುತ್ತದೆಎಂದು ನುಡಿದರು. ಇತಿಹಾಸ ಪ್ರಧ್ಯಾಪಕಪ್ರೊ.ಕೆ.ಸದಾಶಿವ ದಿಕ್ಸೂಚಿ ಭಾಷಣ ಮಾಡಿದರು. ಅರಸುಕುರನ್ಗರಾಯರ ಹೆಜ್ಜೆಗಳು ಕುರಿತುಡಾ.ರವಿಕುಮಾರ್ ನೀಹ ಮಾತನಾಡಿದರು. ಡಾ.ಬಾಬೂ ಜಗಜೀವನರಾಮ್‌ಅಧ್ಯಯನಕೇಂದ್ರದ ನಿರ್ದೇಶಕ ಪ್ರೊ.ಆರ್.ತಿಮರಾಯಪ್ಪಅಧ್ಯಕ್ಷತೆ ವಹಿಸಿದ್ದರು. ಮಾತಂಗ ನೌಕರರಕ್ಷೇಮಾಭಿವೃದ್ಧಿ ಸಂಘದಅಧ್ಯಕ್ಷಚೇತನ್ ಉಪಸ್ಥಿತರಿದ್ದರು. ಶೇಷಣ್ಣ ಪ್ರಾರ್ಥಿಸಿದರು. ಉಮೇಶ್ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular