ತಾಲೂಕು ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮಕ್ಕಳು ಮಾನಸಿಕವಾಗಿ ಪ್ರಭುದ್ಧರಾಗಬೇಕಾದರೆ ಅವರಿಗೆ ಪೋಷಕರು ಶ್ರೇಷ್ಠತೆಯ ಪಾಠ ಹೇಳಿಕೊಡಬೇಕು ಎಂದು ಡಯಟ್ ಪ್ರಾಂಶುಪಾಲ ನಾಗರಾಜು ಹೇಳಿದರು. ಕೆ.ಆರ್.ನಗರ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಶಿವಾನುಭವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯಿತ ನೌಕರರ
ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಶೈವ ಮಠ ಮಾನ್ಯಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿದವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಲಿದ್ದು ಇದಕ್ಕೆ ಅಲ್ಲಿ ನಮಗೆ ಕಲಿಸುವ ಸಂಸ್ಕೃತಿ ಕಾರಣ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪರಸ್ಪರ ಸಹಾಯ ಮತ್ತು ಸಹಕಾರದ ಮನೋಭಾವನೆ ಬೆಳೆಸಿಕೊಂಡು ಸುತ್ತಲಿನ ಪರಿಸರವನ್ನು ಅವಲೋಕಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಆಸಕ್ತಿದಾಯಕ ವಿಷಯಗಳನ್ನು ಅಧ್ಯಯನ ಮಾಡುವಾಗ ಆ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದ ಅವರು ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮನೋಭಿಲಾಷೆ ಅರಿತು ಸೂಕ್ತ ಪ್ರೋತ್ಸಾಹ ನೀಡಬೇಕೆಂದು ನುಡಿದರು.
ಅಂಕನಹಳ್ಳಿ ಬಸವಕಲ್ಯಾಣ ಮಠದ ವಿಜಯಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ಬಸವ ಬಳಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ. ಪ್ರದೀಪ್ ಕುಮಾರ್ , ಸಾಲಿಗ್ರಾಮ ತಹಸಿಲ್ದಾರ್ ಸೋಮನಗೌಡ ಎನ್ ನರಗುಂದ ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಅಧಿಕಾರದ ಅಧ್ಯಕ್ಷ ಕೆ. ಎಸ್. ಮಹೇಶ್, ಟಿಎಪಿಸಿಎಂಸ್ ಮಾಜಿ ನಿರ್ದೇಶನ ಎಲ್.ಪಿ.ರವಿಕುಮಾರ್ ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ನಿಕಟ ಪೂರ್ವ ಅಧ್ಯಕ್ಷ ಎಚ್ಎಸ್ ಜಗದೀಶ್, ಅಧ್ಯಕ್ಷ ರಾಜಶೇಖರ್ ಕಲ್ಯಾಣಪುರ, ಗೌರವಾಧ್ಯಕ್ಷ ಬಿ. ಎಸ್, ಚನ್ನಬಸಪ್ಪ, ಉಪಾಧ್ಯಕ್ಷರಾದ ಚಂದ್ರಶೇಖರ್, ಹೆಚ್. ಬಿ. ಅನುಸೂಯರಾಣಿ, ಖಜಾಂಚಿ ಗಂಗಾಧರ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಅಣ್ಣಾಜಪ್ಪ, ಸಹ ಕಾರ್ಯದರ್ಶಿ ಎಸ್. ಹರೀಶ್ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.