Sunday, April 20, 2025
Google search engine

HomeUncategorizedಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ನನ್ನ ಮೊದಲ ಆಯ್ಕೆ ಬಿಜೆಪಿ: ಗಾಲಿ ಜನಾರ್ದನ ರೆಡ್ಡಿ

ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ನನ್ನ ಮೊದಲ ಆಯ್ಕೆ ಬಿಜೆಪಿ: ಗಾಲಿ ಜನಾರ್ದನ ರೆಡ್ಡಿ


ಗಂಗಾವತಿ: ದೇಶದ ಅಭಿವೃದ್ಧಿ ವಿಚಾರ, ಸಮರ್ಥ ನಾಯಕ, ವಿಶ್ವವನ್ನೇ ಮುನ್ನಡೆಸುವ ಸಾಮರ್ಥ್ಯ ಇರುವ ಪ್ರಧಾನಿ ನರೇಂದ್ರ ಮೊದಿ ಅವರ ವಿಚಾರ ಬಂದಾಗ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ನನ್ನ ಮೊದಲ ಆಯ್ಕೆ ಬಿಜೆಪಿಯೇ ಆಗಿರುತ್ತದೆ. ಆದ್ರೆ, ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ ಎಂದು ಗಂಗಾವತಿ ಶಾಸಕ, ಕೆಆರ್ ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಮೋದಿಯಂತಹ ನಾಯಕನ ನಾಯಕತ್ವ ದೇಶಕ್ಕೆ ಬೇಕಿದೆ. ಉತ್ತಮ ಕೆಲಸ ಮಾಡುವ ಯಾವುದೇ ವ್ಯಕ್ತಿ ಇದ್ದರೂ ಅವರನ್ನು ಮೆಚ್ಚಬೇಕಾದ್ದದ್ದು ನಮ್ಮ ಧರ್ಮ. ಭಾರತೀಯರಾಗಿರುವ ನಾವು ಮೋದಿಯನ್ನು ಪ್ರಶಂಸಿಸಬೇಕು, ಅಭಿನಂದಿಸಬೇಕು. ಹೀಗಾಗಿ ದೇಶದ ವಿಚಾರ ಬಂದಾಗ ಬಿಜೆಪಿಯವರು ಮುಂದೆ ಬಂದು ಹೊಂದಾಣಿಕೆಯ ಪ್ರಸ್ತಾಪವಿಟ್ಟರೆ ಅದಕ್ಕೆ ನಾನು ಸ್ಪಂದಿಸುತ್ತೇನೆ. ಹೊಂದಾಣಿಕೆ ಆಗುವುದಾದರೆ ಕೇವಲ ಬಿಜೆಪಿಯೊಂದಿಗೆ ಮಾತ್ರ ಎಂದು ಅವರು ತಿಳಿಸಿದರು.
”ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿ ನನ್ನ ಪಕ್ಷದಿಂದ ಅಭ್ಯರ್ಥಿಗಳನ್ನು ಹಾಕುವಷ್ಟು ಶಕ್ತಿ ನನಗಿಲ್ಲ. ಅದಕ್ಕೆ ಸಮಯವೂ ಇಲ್ಲ. ಹೀಗಾಗಿ ನಾನು ಮೊದಲಿನಿಂದಲೂ ನನ್ನದು ಒಂದೇ ನಿಲುವು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಪಕ್ಷದಿಂದ ಐದಾರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇನೆ. ಹಾಕಿರುವ ಕ್ಷೇತ್ರದಲ್ಲಿ ನನ್ನ ಶಕ್ತಿ ಮೀರಿ ನನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಯತ್ನ ಮಾಡುತ್ತೇನೆ. ದೇಶದಲ್ಲಿ ತಿರುಪತಿ ಮತ್ತು ಅಯೋಧ್ಯೆ ಹೇಗೆ ಪ್ರಮುಖ ಧಾರ್ಮಿಕ ತಾಣಗಳಾಗಿವೆಯೋ ಹಾಗೆ ಅಂಜನಾದ್ರಿಯನ್ನೂ ಮೂರನೇ ಅತಿದೊಡ್ಡ ಪವಿತ್ರ ಧಾರ್ಮಿಕ ತಾಣವನ್ನಾಗಿಸುವ ಉದ್ದೇಶ ಇದೆ” ಎಂದು ವಿವರಿಸಿದರು.

ಗಂಗಾವತಿ ಕ್ಷೇತ್ರದ ಅಭಿವೃದ್ಧಿ ವಿಚಾರ, ಸರ್ಕಾರಿ ಸಂಸ್ಥೆಗಳಿಗೆ ನಾಮನಿರ್ದೇಶನದಲ್ಲಿ ಅನಗತ್ಯ ಮೂಗು ತೂರಿಸುತ್ತಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುಂಬರುವ ಲೋಕಸಭಾ ಚುನಾವಣೆಯ ಬಳಿಕ ಮೂಲೆ ಗುಂಪಾಗಲಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನ್ಸಾರಿ ರಾಜಕೀಯವಾಗಿ ಮೂಲೆ ಗುಂಪಾಗಿರುವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಾರೆ. ರಾಜಕೀಯದಲ್ಲಿ ಒಮ್ಮೆ ಸೋತು, ಒಮ್ಮೆ ಗೆದ್ದಿದ್ದರೆ ಅವರಿಗೆ ಹುಮ್ಮಸ್ಸು ಇರುತಿತ್ತು. ಆದರೆ, ಸತತ ಸೋಲಿನಿಂದ ಕಂಗೆಟ್ಟಿರುವ ಅನ್ಸಾರಿ ರಾಜಕೀಯ ಜೀವನ ಮುಗಿದಿದೆ. ಹೀಗಾಗಿ ಮಾನಸಿಕವಾಗಿ ಒತ್ತಡದಲ್ಲಿರುವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹಿರಿಯ ರಾಜಕಾರಣಿಯಾಗಿ ಅಭಿವೃದ್ಧಿ ವಿಚಾರದಲ್ಲಿ ನಗರದ ಬೆಳವಣಿಗೆ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಮ ಮಾಡುವ ಬದಲು ಸಹಕಾರ ನೀಡಬೇಕಿತ್ತು. ಕ್ಷುಲ್ಲಕ ವಿಚಾರದಲ್ಲಿ ಕೈ ಹಾಕ್ತಾರೆ ಎಂದರೆ ಯಾವ ಹಂತಕ್ಕೆ ಅವರು ಇಳಿದಿದ್ದಾರೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಚುನಾವಣೆಯ ಬಳಿಕ ಸ್ವತಃ ಕಾಂಗ್ರೆಸ್ ಪಕ್ಷ ಅವರನ್ನು ನಿರ್ಲಕ್ಷಿಸುತ್ತದೆ ಎಂದು ಅವರು ಕಿಡಿಕಾರಿದರು.
ಚುನಾವಣೆ ಇದೆ, ಮತ ಬ್ಯಾಂಕ್ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದವರು ಅಷ್ಟಿಷ್ಟು ಸಪೋರ್ಟ್ ಮಾಡ್ತಾ ಇದ್ದಾರೆ. ಎಲೆಕ್ಷನ್ ಬಳಿಕ ಅವರ ಮನೆ ಹತ್ತಿರ ಕಾಂಗ್ರೆಸ್ ಪಕ್ಷದವೇ ಹೋಗಲ್ಲ. ಅವರ ಮುಖ ನೋಡಲ್ಲ ಎಂದು ಟೀಕಿಸಿದರು.

RELATED ARTICLES
- Advertisment -
Google search engine

Most Popular