ಮಂಡ್ಯ: ರೈತರ ಹೋರಾಟವನ್ನು ಸುಮ್ಮನೇ ಕಡೆಗಣಿಸಬೇಡಿ. ರೈತರ ಜೊತೆ ನಾವು ಇದ್ದೆ ಇರ್ತೇವೆ. ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿಲ್ಲವಾದರೆ ಮುಂದೆ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯ ಅಂದ್ರೆ ಹೋರಾಟದ ಕಿಚ್ಚು ಯಾವತ್ತು ಕಿಚ್ಚು ಆರುವುದಿಲ್ಲ. ಮಂಡ್ಯದಲ್ಲಿ ಕಿಚ್ಚು ಹತ್ತಿದರೆ ಡೆಲ್ಲಿವರೆಗೆ ಹತ್ತಿಕೊಳ್ಳುತ್ತೆ ಎಂದರು.

ಕಾವೇರಿ ಹೋರಾಟ ನಮ್ಮ ನೆಲ ಜಲ.ನಮ್ಮ ನೆಲ ಜಲಕ್ಕೆ ನಾವೇ ಹೋರಾಟ ಮಾಡ್ತಿದ್ದೇವೆ ಅಂದ್ರೆ ನಾಚಿಕೆಗೇಡಿನ ಸಂಗತಿ. ಪ್ರತಿ ವರ್ಷ ಮಳೆ ಇಲ್ಲದಿದ್ದಾಗ ಕಾವೇರಿ ನೀರಿನ ಸಮಸ್ಯೆ. ಕರ್ನಾಟಕಕ್ಕೆ ನೀರಿಲ್ಲ ಎಂದು ತಮಿಳುನಾಡಿಗೆ ಗೊತ್ತಿದ್ದರು. ನಮ್ಮ ನೀರನ್ನ ತಮಿಳುನಾಡು ಕಸಿದುಕೊಂಡು ಹೊಗ್ತಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ನಮ್ಮ ವಕೀಲರು ನಿಯೋಗ ಪ್ರಧಾನ ಮಂತ್ರಿ ಬಳಿ ಹೋಗಲಿ, ಪ್ರಧಾನಿ ಮುಂದೆ ತಮಿಳುನಾಡು ಹಾಗೂ ಕರ್ನಾಟಕದ ಮುಖ್ಯಮಂತ್ರಿ ಕೂತು ಚರ್ಚಿಸಲಿ ಎಂದರು.
ಸುಪ್ರೀಂ ಕೋರ್ಟ್ ತೀರ್ಮಾನದ ಬಳಿಕ ಇಷ್ಟೆಲ್ಲ ಮಾಡ್ತಿದ್ದಾರೆ. ಕರ್ನಾಟಕದ ಜನರನ್ನ ಉಳಿಸುವ ಇಚ್ಚಾಶಕ್ತಿ ಸರ್ಕಾರಕ್ಕೆ ಇದ್ದಿದ್ರೆ ಜನರು ಬೀದಿಗೆ ಬರುವ ಅವಶ್ಯಕತೆ ಇರಲಿಲ್ಲ. ನಿಮ್ಮನ್ನ ಗೆಲ್ಲಿಸಿದ್ದೇವೆ ನ್ಯಾಯ ಕೊಡಿಸಿ. ನಿಮ್ಮ ಜೊತೆ ಮಠಾದೀಪತಿಗಳು ಇದ್ದೇವೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾಡಿ ಎಂದು ಒತ್ತಾಯಿಸಿದರು.