Sunday, April 20, 2025
Google search engine

Homeರಾಜಕೀಯಚುನಾವಣೆಗೆ ನಿಂತರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ, ಇಲ್ಲದಿದ್ದರೆ ಎಲ್ಲೂ ನಿಲ್ಲುವುದಿಲ್ಲ: ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ

ಚುನಾವಣೆಗೆ ನಿಂತರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ, ಇಲ್ಲದಿದ್ದರೆ ಎಲ್ಲೂ ನಿಲ್ಲುವುದಿಲ್ಲ: ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ರಾಜಕೀಯವಾಗಿ ನನಗೆ ಚಿಕ್ಕಬಳ್ಳಾಪುರ ಜನತೆ ಜೀವ ದಾನ ಮಾಡಿದ್ದು ಚುನಾವಣೆಗೆ ನಿಂತರೆ ಚಿಕ್ಕಬಳ್ಳಾಪುರದಲ್ಲಿ ನಿಲ್ಲುವೆ, ಇಲ್ಲದಿದ್ದರೆ ಬೇರೆ ಎಲ್ಲೂ ನಿಲ್ಲುವುದಿಲ್ಲ ಎಂದು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಹೇಳಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಮುಂದಿನ ಲೋಕಸಭೆಗೆ ಚಿಕ್ಕಮಗಳೂರು ಹಾಗೂ ಮಂಗಳೂರಿನವರೂ ಕೂಡ ನನ್ನನ್ನು ಕರೆಯುತ್ತಿದ್ದಾರೆ. ಆದರೆ ನಾನೂ ನೀವು ತಳ್ಳಿದರೂ ಹೋಗುವುದಿಲ್ಲ ಎಂದರು.

ಚಿಕ್ಕಬಳ್ಳಾಪುರ ಜನರ ಋಣ ನನ್ನ ಮೇಲಿದೆ. ನನಗೆ ಅಧಿಕಾರ ದುರಾಸೆ ಇಲ್ಲ. ಕಳೆದ ಐದು ವರ್ಷದಿಂದ ಅಧಿಕಾರ ಇಲ್ಲದೇ ಇದ್ದರೂ ಕ್ಷೇತ್ರದಲ್ಲಿ ಜನರ ನಡುವೆ ಓಡಾಡಿಕೊಂಡಿದ್ದೇನೆ ಎಂದರು.

ಕಾಂಗ್ರೆಸಿನಲ್ಲಿ ಮುಖ್ಯಮಂತ್ರಿಯಾದವರು ಬೇರೆ ಪಕ್ಷಗಳಿಗೆ ಹೋದರೂ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ ಎಂದ ಮೊಯ್ಲಿ, ಸಾಹಿತ್ಯದಲ್ಲಿ ಕೂಡ ನಾನು ಸಕ್ರಿಯವಾಗಿದ್ದೇನೆ. ನನ್ನ ಸಾಹಿತ್ಯಕ್ಕೆ ಮೂರ್ತಿದೇವಿ ಪ್ರಶಸ್ತಿ ಬಂದಿದೆ. ಯಾವ ಸಾಹಿತಿಗೂ ಈ ಪ್ರಶಸ್ತಿ ಬಂದಿಲ್ಲ. ನಾನು ಮೂರನೇ ಮಹಾಕಾವ್ಯವನ್ನು ಬರೆದಿದ್ದೇನೆ. ಸದ್ಯದಲ್ಲೇ ಗದ್ಯ ಕಾವ್ಯ ಕೂಡ ಬಿಡುಗಡೆಗೊಳ್ಳಲಿದೆ ಎಂದರು.

RELATED ARTICLES
- Advertisment -
Google search engine

Most Popular