Friday, April 18, 2025
Google search engine

Homeರಾಜ್ಯನಾನು ಬದುಕಿದ್ದರೆ ಮತ್ತೊಂದು ಚುನಾವಣೆಗೆ ಬರುತ್ತೇನೆ : ಎಚ್ .ಡಿ ದೇವೇಗೌಡ ವಾಗ್ದಾಳಿ

ನಾನು ಬದುಕಿದ್ದರೆ ಮತ್ತೊಂದು ಚುನಾವಣೆಗೆ ಬರುತ್ತೇನೆ : ಎಚ್ .ಡಿ ದೇವೇಗೌಡ ವಾಗ್ದಾಳಿ

ರಾಮನಗರ : ರಾಜ್ಯದ ಸಿಎಂ ಆಗಿ ನಾನೆ ಮುಂದುವರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇದೀಗ ಎಚ್ ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದು, ಈಗಲೂ ನಾನೇ ಸಿಎಂ ಮುಂದೆಯೂ ನಾನೇ ಸಿಎಂ ಅಂತ ಹೇಳುತ್ತಾರೆ. ಈ ವಿಚಾರವಾಗಿ ಅಯ್ಯೋ ಎಂದು ಎಚ್ ಡಿ ಗೌಡರು ತಲೆಹೆಚ್ಚಿಕೊಂಡಿದ್ದಾರೆ.

ಚನ್ನಪಟ್ಟಣದ ರಾಂಪುರ ಗ್ರಾಮದಲ್ಲಿ ಮೊಮ್ಮಗ ನಿಖಿಲ್ ಕುಮಾರ ಸ್ವಾಮಿ ಪರವಾಗಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಸಿಎಂ ಅವರನ್ನು ಲೋಕಾಯುಕ್ತ ವಿಚಾರಣೆ ನಡೆಸಿದ್ದಕ್ಕೆ ಎಚ್ ಡಿ ದೇವೇಗೌಡ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ನಾಯಕರನ್ನು ನಂಬಬೇಡಿ ಎಂದು ನನ್ನ ಪತ್ನಿ ಹೇಳಿದ್ದರು ಕಾಂಗ್ರೆಸ್ನವರು ಮೋಸ ಮಾಡುತ್ತಾರೆ ಎಂದು ಹೇಳಿದ್ದರು. ನಿಮ್ಮ ಆಶೀರ್ವಾದದಿಂದ ಇನ್ನೂ ೪-೫ ವರ್ಷ ಬದುಕಿರುತ್ತೇನೆ ಹೋರಾಟ ಮಾಡುತ್ತೇನೆ.

ಲೂಟಿ ಮಾಡುತ್ತಿರುವ ಕಾಂಗ್ರೆಸ್ ತೆಗೆಯುವವರೆಗೂ ಹೊರಡುತ್ತೇನೆ. ನಾನು ಬದುಕಿದ್ದರೆ ಮತ್ತೊಂದು ಚುನಾವಣೆಗೆ ಬರುತ್ತೇನೆ. ನಿಮ್ಮ ರಕ್ತ ಹೀರುತ್ತಿರುವವರನ್ನು ಕಿತ್ತೊಗೆಯಲು ಬರುತ್ತೇನೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದವರು ಎಚ್ ಡಿ ದೇವೇಗೌಡ ಕಿಡಿಕಾರಿದರು. ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರದ ವೇಳೆ ಎಚ್ ಡಿ ದೇವೇಗೌಡ ಅವರು ರಾಂಪುರ ಗ್ರಾಮದಲ್ಲಿ ಭಾಷಣ ಮಾಡಿದರು.

RELATED ARTICLES
- Advertisment -
Google search engine

Most Popular