ಬೆಂಗಳೂರು: ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುತ್ತಿಲ್ಲ. ಅಕ್ಕಿ ಸಂಗ್ರಹವಿದ್ದರೂ ತಡೆಹಿಡಿದಿದೆ ಎಂದು ಆರೋಪಿಸಿದ್ಧ ಸಿಎಂ ಸಿದ್ಧರಾಮಯ್ಯರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಟಿ ರವಿ, ಬಡವರಿಗೆ ತಲಾ 5 ಕೆಜಿ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರ. ಮೋದಿ ನೇತೃತ್ವದ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಕೊಡುತ್ತಿದೆ. ಸಿಎಂರವರೆ ನಿಮ್ಮ ಪ್ರಣಾಳಿಕೆಯಂತೆ ತಲಾ 10 ಕೆಜಿ ಅಕ್ಕಿ ನೀಡಿ .ಅಕ್ಕಿ ನೀಡಲು ಆಗದಿದ್ದರೇ ಅಲ್ಲಿಯವರೆಗೆ ಬಡವರ ಖಾತೆಗೆ ಹಣ ಹಾಕಿ. ಪ್ರತಿಯೊಬ್ಬ ಬಡವರ ಖಾತೆಗೆ ತಲಾ 10ಕೆಜಿ ಅಕ್ಕಿಗೆ ಮಾರುಕಟ್ಟೆ ದರದಲ್ಲಿ ಹಣವನ್ನ ಹಾಕಿ ಎಂದು ಆಗ್ರಹಿಸಿದರು.