ಗದಗ: ಸಿದ್ದರಾಮಯ್ಯ ಪ್ರಧಾನಮಂತ್ರಿ ಆಗ್ಬೇಕು ಅಂತಾ ಅವರ ಹಣೆಯಲ್ಲಿ ಬರೆದಿದ್ರೆ, ಅವಕಾಶ ಇದ್ದರೆ.. ಯಾರು ತಪ್ಪಿಸೋದಕ್ಕೆ ಆಗುತ್ತೆ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ನುಡಿದರು.
ಶೆಫರ್ಡ್ ಇಂಟರ್ ನ್ಯಾಷನಲ್ ಸಂಘಟನೆ ವಾರ್ಷಿಕೋತ್ಸವ ಪೂರ್ವಭಾವಿ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವೇಗೌಡ್ರು ಪ್ರಧಾನಿಮಂತ್ರಿ ಆಗ್ತೇನೆ ಅಂತಾ ಕನಸು ಕಂಡಿದ್ರಾ ಎಂದು ಪ್ರಶ್ನಿಸಿದರು.
ಹರದನಹಳ್ಳಿಯಲ್ಲಿ ಹುಟ್ಟಿ ಅಲ್ಲಿಂದ ಚಿಮ್ಮಿ ಗಣತಂತ್ರ ವ್ಯವಸ್ಥೆಯ ಎತ್ತರದ ಸ್ಥಾನ ಏರಿದ್ರು.. ಪೊಲಿಟಿಕ್ಸ್ ಅನ್ನೋದು ಅವಕಾಶ.. ಡೆಮಾಕ್ರಟಿಕ್ ಐಡಿಯಾಲಜಿನಲ್ಲಿ ಪೊಲಿಟಿಕ್ಸ್ ಸೇರಿಕೊಂಡಿದೆ. ಯಾವುದನ್ನೂ ತಳ್ಳಿಹಾಕೋದಕ್ಕೆ ಸಾಧ್ಯವಿಲ್ಲ.. ಏನ್ ಬೇಕಾದ್ರೂ ಆಗ್ಬಹುದು ಎಂದರು.
ಹಿಂದುಯೂ ಪಾರ್ಲಿಮೆಂಟ್ ಮೇಂಬರ್ ಆಗಿದ್ದೆ. ಮತ್ತೊಮ್ಮೆ ಆಗ್ಬೇಕಂತಿದೆ. ಬಯಕೆಯೂ ಇದೆ. ಅವಕಾಶ ಇರಬೇಕು. ಪಾಲಿಟಿಕ್ಸ್ ಅನ್ನೋದು ಅವಕಾಶ ಎಂದ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದರು.
ಹೆಸರು ಘೋಷಣೆ ಮುಂಚೆ ಹಲವಾರು ಹೆಸರು ಓಡಾಡುತ್ತಿರುತ್ತವೆ. ಟಿಕೆಟ್ ಕೊಡೋದು ಒಬ್ಬರಿಗೆ. ಯತೀಂದ್ರ ಆದ್ರೂ ಪರವಾಗಿಲ್ಲ. ಯತೀಂದ್ರ ಅವರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.