ಮೈಸೂರು: ಬಿಜೆಪಿ ಮೈಸೂರು ನಗರ (ಜಿಲ್ಲಾ) ಯುವ ಮೋರ್ಚಾ ವತಿಯಿಂದ ಕರ್ನಾಟಕ ರಾಜ್ಯ ಕ್ರೀಡೆ, ಯುವ ಜನ ಸಚಿವರು,ಹಾಗೂ ಪರಿಶಿಷ್ಟ ಪಂಗಡ, ನಿಗಮದ ಅಧ್ಯಕ್ಷರಾದ ನಾಗೇಂದ್ರ ರವರು 187 ಕೋಟಿ ಹಣವನ್ನ ದುರುಪಯೋಗ ಪಡೆಸಿಕೊಂಡು ಭ್ರಷ್ಟಾಚಾರವನ್ನು ಮಾಡಿರುವ ವಿರುದ್ಧವಾಗಿ ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ದಿಕ್ಕಾರ ಕೂಗುವ ಮುಖಾಂತರ ನೂತನ ಜಿಲ್ಲಾಡಳಿತ ಕಚೇರಿ ಮುಂಭಾಗ ಪ್ರತಿಭಟಿಸಿ ರಸ್ತೆ ತಡೆ ಮಾಡಿದರು .
ಇದೇ ಸಂದರ್ಭದಲ್ಲಿ ಮಾತನಾಡಿದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ರವರು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈಗಾಗಲೇ ನೂರು ಪರ್ಸೆಂಟ್ ಹಗರಣ ನಡೆಯುತ್ತಿದ್ದು ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಬಸ್ ಫ್ರೀ, 2000 ಹಣ ಫ್ರೀ, ಹಾಗೂ ಕರೆಂಟ್ ಫ್ರೀ, ಕೊಡುವುದರ ಮೂಲಕ ರಾಜ್ಯದ ಖಜನೆ ಖಾಲಿಯಾಗಿದೆ, ಆದ್ದರಿಂದ ಸಚಿವರಿಗೆ ದಲಿತರು, ಮತ್ತು ವಾಲ್ಮೀಕಿ ಸಮುದಾಯದ ಮೀಸಲಿಟ್ಟಿರುವ ಹಣವನ್ನು ದುರುಪಯೋಗಿಸಿಕೊಳ್ಳುವ ಮುಖಾಂತರ ಆ ಸಮುದಾಯಗಳಿಗೆ ದ್ರೋಹ ಮಾಡುವ ಕೆಲಸ ಮಾಡಿದೆ, ಇದರ ಮೂಲಕ ಕಾಂಗ್ರೆಸ್ ಸರ್ಕಾರವು 100% ಸರ್ಕಾರ ಎಂದು ಕರ್ನಾಟಕ ರಾಜ್ಯ ಜನತೆ ಈಗಾಗಲೇ ನಿರ್ಧರಿಸಿ ಚೀಮಾರಿಯಾಕ್ಕುತಿದೆ, ಆದ್ದರಿಂದ ಈ ಕೂಡಲೇ ಸಚಿವ ನಾಗೇಂದ್ರ ರಾಜೀನಾಮೆ ನೀಡಲೇಬೇಕು ಎಂದು ಅಗ್ರಹ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಸಚಿವ ನಾಗೇಂದ್ರರವರು ರಾಜೀನಾಮೆ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ, ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಹ ರಾಜೀನಾಮೆ ನೀಡಲೇಬೇಕು ಎಂದು ಅಗ್ರಹ ಮಾಡುತ್ತೆವೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಅನಿಲ್ ಥಾಮಸ್, ರಾಜ್ಯ ಬಿಜೆಪಿ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್, ರಾಜ್ಯ ಬಿಜೆಪಿ ಯುವ ಮೋರ್ಚಾ ಯೋಜನೆ ಹಾಗೂ ಸಂಶೋಧನೆಯ ಸಂಚಾಲಕರಾದ ಪ್ರಣಯ್, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಲೋಹಿತ್ ಡಿ, ಸಚಿನ್, ಹಾಗೂ ಮಾಜಿ ನಗರ ಪಾಲಿಕೆ ಸದಸ್ಯರಾದ ಬಿ ವಿ ಮಂಜುನಾಥ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ ಎಂ ರಘು, ಮೈಸೂರು ಗ್ರಾಮಾಂತರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಮಧು ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ಬಿಜೆಪಿ ಮುಖಂಡರಾದ ಮನು,ಧನರಾಜ್,ಬದ್ರಿಶ್,ಊಟಗಳ್ಳಿ ನಾಗರಾಜು, ನಿಶಾಂತ್, ನವೀನ್, ಮೋಹನ್, ಮಧು, ಮನೋಹರ್,ಶಿವರಾಜು, ಲೀಲಾ ಶೆಣೈ, ಉಮೇಶ್, ಸಾಗರ್, ಪ್ರಭು,ನವೀನ್ ಶೆಟ್ಟಿ,ಚಂದನ್ ಗೌಡ, ಮೊಟ ರಾಜು, ಮುಂತಾದವರು ಉಪಸ್ಥಿತರಿದ್ದರು.