Friday, April 4, 2025
Google search engine

Homeರಾಜಕೀಯಮುಖ್ಯಮಂತ್ರಿ ಸ್ಥಾನ ಬದಲಾದರೆ ಹರಿಪ್ರಸಾದ್ ಗೆ ಸಿಎಂ ಹುದ್ದೆ ನೀಡಿ; ಪ್ರಣವಾನಂದ ಸ್ವಾಮೀಜಿ

ಮುಖ್ಯಮಂತ್ರಿ ಸ್ಥಾನ ಬದಲಾದರೆ ಹರಿಪ್ರಸಾದ್ ಗೆ ಸಿಎಂ ಹುದ್ದೆ ನೀಡಿ; ಪ್ರಣವಾನಂದ ಸ್ವಾಮೀಜಿ

ಡಿಕೆ ಶಿವಕುಮಾರ್ ವಿರುದ್ಧ ಕಿಡಿ

ಯಾದಗಿರಿ: ಸ್ವಾಮೀಜಿಗಳು ರಾಜಕೀಯ ತಂಟೆಗೆ ಬರಬೇಡಿ ಎನ್ನುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರಣವಾನಂದ ಸ್ವಾಮೀಜಿ ಕೆಂಡಾಮಂಡಲರಾಗಿದ್ದಾರೆ. ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನಿಸಬೇಡಿ. ಅಪಮಾನಿಸಿದ್ರೆ ಮುಂದಿನ ದಿನಗಳಲ್ಲಿ ಮಠಕ್ಕೆ ಕಾಲಿಡಬೇಡಿ. ನೀವು ಮಾಡಿದ್ದೆಲ್ಲವನ್ನೂ ಸರಿ ಅಂತ ಒಪ್ಪಿಕೊಳ್ಳೋಕೆ ಸಿದ್ಧರಿಲ್ಲ ಎಂದು ಕಿಡಿಕಾರಿದ್ದಾರೆ.

ಯಾದಗಿರಿಯಲ್ಲಿ ಇಂದು ಮಾತನಾಡಿದ ಪ್ರಣವಾನಂದ ಸ್ವಾಮೀಜಿ ,ಚಂದ್ರಶೇಖರ ಶ್ರೀಗಳು ಹೇಳಿದಾಗ ಎಲ್ಲರೂ ಸ್ವಾಗತಿಸಿದರು. ಡಿ.ಕೆ.ಸುರೇಶ್​, ಬಾಲಕೃಷ್ಣ, ಚಲುವರಾಯಸ್ವಾಮಿ ಸ್ವಾಗತಿಸಿದ್ರು. ಒಂದು ಕಡೆ ಶ್ರೀಗಳ ಹೇಳಿಕೆಯನ್ನ ಸ್ವಾಗತ ಮಾಡೋದು. ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡ ಎಂದು ಹೇಳುವುದು. ಇದು ಡಿ.ಕೆ.ಶಿವಕುಮಾರ ಅವರ ರಾಜಕೀಯ ಗಿಮಿಕ್. ನಮಗೆ ನೋವಾಗಿದಕ್ಕೆ ನಾವು ಹೇಳ್ತಿದ್ದೇವೆ. ನಮಗೆ ಯಾರು ಡಿಸಿಎಂ ಸ್ಥಾನ ಕೊಟ್ಟಿಲ್ಲ.ಈಗಾಗಲೇ ಡಿ.ಕೆ.ಶಿವಕುಮಾರ್​​ ಉಪಮುಖ್ಯಮಂತ್ರಿ ಇದ್ದಾರೆ. ಜೊತೆಗೆ ಒಕ್ಕಲಿಗ ಸಮುದಾಯದ ಸಚಿವರು ಇದ್ದಾರೆ. ಚಂದ್ರಶೇಖರಶ್ರೀ ಅವರ ಸಮುದಾಯದ ಬಗ್ಗೆ ಮಾತಾಡಿದ್ದಾರೆ. ಆದ್ರೆ ಡಿ.ಕೆ.ಶಿವಕುಮಾರ್​ರದ್ದು ರಾಜಕೀಯ ಗಿಮಿಕ್​ನ ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂದ್ರಶೇಖರ್ ಸ್ವಾಮೀಜಿಯವರು ಅವರ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಆಗಲೆಂದು ಆಗ್ರಹಿಸಿದ್ದಾರೆ. ಆದರೆ ನಾವು ನಮ್ಮ ಸಮುದಾಯದವರು ಡಿಸಿಎಂ ಆಗಬೇಕೆಂದು ಆಗ್ರಹಿಸಿದರೆ ತಪ್ಪೇನು? ಎಂದು ಖಾರವಾಗಿ ಮಾತನಾಡಿದರು.

ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಸಿಎಂ ಸ್ಥಾನ ಬದಲಾವಣೆ ಮಾಡುವುದಾದರೆ ಬಿಕೆ ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಎಂದು ಘೋಷಿಸುವಂತೆ ಪ್ರಣವಾನಂದಶ್ರೀ ಒತ್ತಾಯಿಸಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಗಾಳಿ ಜೋರಾಗಿ ಬಿಸುತ್ತಿದೆ. ಸಿಎಂ ಬದಲಾವಣೆಯ ಮಾಡಬೇಕೋ ಬೇಡವೋ ಹೈಕಮಾಂಡ್ ಚರ್ಚೆಯಲ್ಲಿದೆ. ಒಂದು ವೇಳೆ ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಎದುರಾಗಿದೆ. ಲಿಂಗಾಯತರೇ ಸಿಎಂ ಆಗಬೇಕು ಎಂಬ ಕೂಗು ಎದ್ದಿದೆ. ಇತ್ತ ದಲಿತರಿಗೆ ಪ್ರಾತಿನಿಧ್ಯ ನೀಡಬೇಕು. ದಲಿತರಿಗೆ ಸಿಎಂ ಅವಕಾಶ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಮುಂದಿನ ಸಿಎಂ ಬಗ್ಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

RELATED ARTICLES
- Advertisment -
Google search engine

Most Popular