ಬೆಂಗಳೂರು: ರೈತರ ಜಮೀನು ವಕ್ಫ್ ಹೆಸರಿಗೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ೫೦ ಸಾವಿರಕ್ಕೂ ಹೆಚ್ಚು ಎಕರೆ ಜಮೀನು ವಕ್ಫ್ ವಶಕ್ಕೆ ಪಡೆದುಕೊಂಡಿದೆ. ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಭೂಮಿಯನ್ನ ಯಾವಾಗ ವಕ್ಫ್ಗೆ ಮಾಡಿಕೊಡುತ್ತೋ ಹೇಳಲಾಗಲ್ಲ. ಈ ವಿಚಾರವನ್ನು ಜಂಟಿ ಸಂಸದೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಹುಬ್ಬಳ್ಳಿ, ಬೆಂಗಳೂರಿಗೆ ಬಂದು ರೈತರ ಮನವಿ ಸ್ವೀಕರಿಸಲು ಜೆಪಿಸಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಮನವಿ ಮಾಡಿದ್ದೇನೆ. ನ. ೬, ೭ರಂದು ಎರಡು ದಿನ ರಾಜ್ಯ ಪ್ರವಾಸ ಮಾಡುವ ಸಾಧ್ಯತೆ ಇದೆ ಎಂದರು.
ಸಿಎಂ ಸೂಚನೆ ಮೇರೆಗೆ ವಕ್ಫ್ ಸಚಿವ ಜಮೀರ್ ಅಹಮದ್ ಜಿಲ್ಲೆಗಳಿಗೆ ವಕ್ಫ್ ಅದಾಲತ್ ಮಾಡುತ್ತಿದ್ದಾರೆ. ವಕ್ಪ್ ಅದಾಲತ್ ಯಾವ ಕಾನೂನಿನ ಕೆಳಗೆ ಬಂದಿದೆ ಅದಕ್ಕೆ ಯಾವ ಕಾನೂನಿನ ಮಾನ್ಯತೆ ಇದೆ ಸಂವಿಧಾನದ ಯಾವ ವಿಧಿಯ ಕೆಳಗೆ ಅದಾಲತ್ ನಡೆಸಬಹುದು ವಕ್ಫ್ ಅದಾಲತ್ ಕಾಂಗ್ರೆಸ್ ಪಕ್ಷದ ಅಸಾಂವಿಧಾನಿಕ ಅನ್ವೇಷಣೆ. ವಕ್ಪ್ ಅದಾಲತ್ ನಿಲ್ಲಿಸುವವರೆಗೆ ಕೂಡ ಬಿಜೆಪಿ ಹೋರಾಟ ನಡೆಯುತ್ತದೆ ಎಂದು ಹೇಳಿದ್ದಾರೆ.