ಹೊಸೂರು : ದೇಶಕ್ಕೆ ಅನ್ನ ಕೊಡುವ ರೈತರು ಇಂದಿಗೂ ಸ್ಥಿರವಾಗಿ ಬದುಕಲು ಸರ್ಕಾರ ಸದಾ ಕಾಲ ಇವರ ಬೆನ್ನಿಗೆ ನಿಲ್ಲಬೇಕಿದೆ ಎಂದು ರೈತ ಯೋಧ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೇಶವ ಹೇಳಿದರು. ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗೇಟ್ ನಲ್ಲಿ ನಡೆದ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ದೇಶದ ಆಸ್ತಿಯಾಗಿದ್ದು ಇವರಿಗೆ ಬೆಳೆ ಬೆಳೆಯಲು ಸಕಾಲದಲ್ಲಿ ಬ್ಯಾಂಕ್ ಗಳಿಂದ ಸಾಲ ಮತ್ತು ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ರಸಗೊಬ್ಬರದ ಜೊತಗೆ ಪ್ರತಿ ಬೆಳೆಗೂ ದರ ನಿಗದಿ ಮಾಡಿ ರೈತರ ಹಿತ ಕಾಯಲು ಮುಂದಾದರೇ ಮಾತ್ರ ರೈತರು ನೆಮ್ಮದಿಯ ಬದುಕು ಕಟ್ಟಿ ಕೊಳ್ಳಲು ಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಕೃಷಿ ಮತ್ತು ತೋಟಗಾರಿಕೆ ತಜ್ಞರನ್ನು ಕರೆಸಿ ರೈತರಿಗೆ ಉಪಯೋಗವಾಗುವ ಶಿಭಿರ ಮತ್ತು ವಿಚಾರ ಸಂಕೀರ್ಣವನ್ನು ಆಯೋಜಿಸಿ ತಜ್ಞರಿಂದ ಕೃಷಿಯ ಲಾಭದ ಕುರಿತು ಮಾಹಿತಿ ಒದಗಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ಸುರೇಶ್,ಜಗದೀಶ್,ಹರೀಶ,ಅರುಣ,ಅಭಿ,ಸಣ್ಣೇಗೌಡನಕೊಪ್ಪಲು ರಘು, ಸುರೇಶ,ಚನ್ನಂಗೆರೆ ಕುಮಾರ,ಹನಸೋಗೆ ಮಂಜು,ನಟರಾಜು,ಮಧು ಸೇರಿದಂತೆ ಇನ್ನಿತರರು ಹಾಜರಿದ್ದರು.