ಹುಣಸೂರು: ಪತ್ರಿಕಾ ರಂಗ ದುರ್ಬಲಗೊಂಡರೆ ಸಮಾಜಕ್ಕೆ ದೊಡ್ಡ ಗಂಡಾಂತರ ಬೀಳಲಿದ್ದು, ಯಾರೋ ಹೇಳಿದ್ದು, ಕೊಟ್ಟಿದ್ದನ್ನು ಬರೆದು ಮತ್ತೊಬ್ಬರಿಗೆ ನೋವುಂಟು ಮಾಡುವುದರ ಬದಲು ನೈಜ ಸುದ್ದಿ ಪ್ರಕಟಿಸುವ ಮೂಲಕ ಪತ್ರಿಕಾ ಧರ್ಮ ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಹುಣಸೂರಿನಲ್ಲಿಂದು ನಡೆದ ತಾಲೂಕು ಪತ್ರಕರ್ತರ ಸಂಘದ ಡೇರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಮಾಧ್ಯಮದ ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪತ್ರಿಕಾ ಧರ್ಮ ಕಾಪಾಡ ಬೇಕಾದ್ದು ಪತ್ರಿಕಾ ರಂಗದ ಕರ್ತವ್ಯ ವಾಗಿದೆ, ಎಂದರು. ಹಿಂದೆಲ್ಲ ದೊಡ್ಡ ರಾಜಕಾರಿಣಿಗಳಿಗೆ ಹಿರಿಯ ಪತ್ರಕರ್ತರು ಮಾರ್ಗದರ್ಶನ ಮಾಡುತ್ತಿದ್ದರು.
ಈಗ ಅಂತಹ ವ್ಯವಸ್ಥೆ ಕಾಣದಾಗಿದೆ. ಇಂದಿನ ಯುವ ಪತ್ರಕರ್ತರಿಗೆ ಹಿರಿಯ ಪತ್ರಕರ್ತರ ಮಾರ್ಗದರ್ಶನದಲ್ಲಿ, ತರಬೇತಿ ಅವಶ್ಯ. ಸಹಕಾರ ಮಹಾ ಮಂಡಲದ ವತಿಯಿಂದ ಇಂತಹ ತರಬೇತಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣ ಕುಮಾರ್ ಸಂಘದ ಪ್ರಗತಿಯನ್ನು ವಿವರಿಸಿ ಸಂಘದ ಅಭಿವೃದ್ದಿಗೆ ಈ ಹಿಂದೆ ಸಹಕರಿಸಿದವರನ್ನು ಸ್ಮರಿಸಿದರು.

ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಅಭ್ಯುದಯ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ದೀಪಕ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾ ಯಣ್, ತಾಲೂಕು ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಹಿರಿಕ್ಯಾತ ನಹಳ್ಳಿ ಸ್ವಾಮಿಗೌಡ ಮಾತನಾಡಿದರು. ಸಂಘದ ವತಿಯಿಂದ ತಾಲೂಕು ಕಸಾಪ ಅಧ್ಯಕ್ಷ ಹರವೆ ಮಹದೇವ್, ಪಿರಿಯಾ ಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ನವೀನ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಘ ವೇಂದ್ರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ದಾ.ರಾ.ಮಹೇಶ್, ತಾ.ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಹನಗೋಡು ನಟರಾಜ್ , ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್ ಎಸ್ ಸಚ್ಚಿತ್, ಉಪಾಧ್ಯಕ್ಷ ಚೆಲುವರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿದ್ದರು.