Monday, April 21, 2025
Google search engine

Homeರಾಜ್ಯಸುದ್ದಿಜಾಲಹೊಸ ವರ್ಷದ ವೇಳೆ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಕೇಸ್

ಹೊಸ ವರ್ಷದ ವೇಳೆ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಕೇಸ್

ತುಮಕೂರು: ಡಿ.೩೧ರ ರಾತ್ರಿ ಹೊಸವರ್ಷದ ಸಂಭ್ರಮಾಚರಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟೆಚ್ಚರವಹಿಸಿದ್ದಾರೆ. ೨೦೨೪ ರ ಹೊಸ ವರ್ಷಾಚರಣೆ ಹಿನ್ನೆಲೆ ತುಮಕೂರಿನ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ನಿರ್ಬಂಧ. ದೇವರಾಯನದುರ್ಗ, ನಾಮದಚಿಲುಮೆ, ಬಸದಿ ಬೆಟ್ಟಕ್ಕೆ ನಿರ್ಬಂಧ. ಇಂದು ಬೆಳಗ್ಗೆ ೮ ಗಂಟೆಯಿಂದ ನಾಳೆ ಬೆಳಗ್ಗೆ ೮ ಗಂಟೆವರೆಗೆ ಸಾರ್ವಜನಿಕರಿಗೆ ನಿರ್ಬಂಧ ೧೪೪ ಸೆಕ್ಸನ್ ಜಾರಿ ಮಾಡಿ ಆದೇಶ. ನಿಷೇಧಿತ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಇದ್ದು ಮೋಜು ಮಸ್ತಿ ಮಾಡದಂತೆ ಎಚ್ಚರಿಕೆ. ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿ ಮಾಡದಂತೆ ಕ್ರಮ, ಕಾನೂನು ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳೊದಾಗಿ ಎಚ್ಚರಿಕೆ. ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿಭದ್ರತೆ.ತುರ್ತು ಸಂದರ್ಭದಲ್ಲಿ ೧೧೨ ಗೆ ಕರೆ ಮಾಡುವಂತೆ ಪರ್ಮೀಷನ್ ಪಡೆದ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಅನುಮತಿ. ರಾತ್ರಿ ಒಂದು ಗಂಟೆವರೆಗೂ ತೆರೆಯಲು ಪೊಲೀಸ್ ಇಲಾಖೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular