ಮಂಡ್ಯ: ವಿಸಿ ನಾಲೆ ಕಾಮಗಾರಿ 20ದಿನಗಳಲ್ಲಿ ಕಂಪ್ಲೀಟ್ ಆಗದಿದ್ರೆ ನಾಲೆಗಿಳಿದು ಬಿಜೆಪಿ ಹೋರಾಟ ಮಾಡಲಿದೆ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಮುಖಂಡ ಅಶೋಕ್ ಜಯರಾಮ್ ಮಾತನಾಡಿ, ವಿಸಿ ನಾಲೆ ಕಾಮಗಾರಿ ಪರಿಶೀಲನೆ ಮಾಡಿದ್ದೇವೆ. ಮಂಡ್ಯ ರೈತರಿಗೆ ಅಘಾತವಾಗುವ ವಿಚಾರವಾಗಿದೆ. ವಿಸಿ ನಾಲೆ ಕಾಮಗಾರಿ ಗುತ್ತಿಗೆ ಆಗಿರುವುದು ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ. ಅಭ್ಯರ್ಥಿ ಆದ ಬಳಿಕ ತಡವಾಗಿ ಕಾಮಗಾರಿ ತಡವಾಗಿ ಮಾಡಿದ್ದಾರೆ ಎಂದು ಹೇಳಿದರು.
ವಿಸಿ ನಾಲೆ ಜಿಲ್ಲೆಯ ದೊಡ್ಡ ಕೊಡುಗೆಯಾಗಿದೆ. ಸಮರ್ಪಕವಾಗಿ ಮಾಡಬೇಕಾದರೆ ರಾಜಕಾರಣ ಬಿಟ್ಟು ಕೆಲಸ ಮಾಡಬೇಕಿತ್ತು. ಕಾಮಗಾರಿಗೆ ನ್ಯಾಯ ದೊರಕಿಸದೆ ಚುನಾವಣೆಯಲ್ಲಿ ಕಾಲ ಕಳೆದಿದ್ದಾರೆ. ಬರಿ 18 ಕಿ.ಮೀ 40% ಮಾತ್ರ ಕಾಮಗಾರಿ ನಡೆದಿದೆ. ಯಾವತ್ತಿಂದ ನೀರು ಕೊಡ್ತಾರೋ ಗೊತ್ತಿಲ್ಲ. ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಹಳ್ಳಿಗಳಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಹೇಳಿದ್ದಾರೆ ಎಂದರು.
ಇಲಾಖೆ ಹಾಗೂ ಕಾಂಟ್ರ್ಯಾಕ್ಟರ್ ತಂಡ ಏನು ಕೆಲಸ ಮಾಡ್ತಿದ್ದಾರೋ ಗೊತ್ತಿಲ್ಲ. ಇದಕ್ಕೆಲ್ಲ ರಾಜ್ಯ ಸರ್ಕಾರದ ವೈಫಲ್ಯ. ಇನ್ನ 20 ದಿನಗಳಲ್ಲಿ ಕಾಮಗಾರಿ ಕಂಪ್ಲೀಟ್ ಮಾಡದಿದ್ದರೆ ನಾಲೆಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.