ಮಂಡ್ಯ : CWRC ಆದೇಶ ನನಗೆ ಆಶ್ಚರ್ಯ ತಂದಿದೆ. ಈ ರೀತಿ ಒಂದು ತೀರ್ಪು ಬರತ್ತೆ ಎಂದು ನಾವು ಬಾವಿಸಿರಲಿಲ್ಲ. ನೀರು ಬಿಟ್ಟರೆ ನಾವು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗತ್ತೆ ಎಂದು ರೈತ ನಾಯಕ, ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿ, CWRC ಸಭೆಯಲ್ಲಿ ನೀರು ಬಿಡದಿರೋ ನಿರ್ಧಾರ ಮಾಡಬೇಕಾಗಿದೆ. ಸರ್ಕಾರ ಈಗ ನೀರು ಬಿಡಲ್ಲ ಎಂದಿದೆ. CWRC, CWMA ವಿರುದ್ಧ ನಮ್ಮ ಹೋರಾಟ ಎಂದು ಹೇಳಿದ್ದಾರೆ.
ಸುಮ್ಮನೆ ರಫ್ ಎಸ್ಟಿಮೇಟ್ ಹಾಕಿದಿದ್ದರು ಗೊತ್ತಾಗಿರೋದು ನೀರು ಬಿಡೋದಿಕ್ಕೆ ಆಗಲ್ಲ ಎಂದು. ಆದರೆ ಯಾವ ಲೆಕ್ಕಾಚಾರದ ಮೇಲೆ ನೀರು ಬಿಡಬೇಕು ಎಂಬ ನಿರ್ಧಾರಕ್ಕೆ ಬಂದರು ಅನ್ನೋದು ಆಶ್ಚರ್ಯ ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.