Thursday, March 26, 2026
Google search engine

Homeರಾಜಕೀಯನನ್ನನ್ನು ತಡೆಯುವ ತಾಕತ್ ಇದ್ದರೆ ತಡೆಯಿರಿ : ಬಿಜೆಪಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ

ನನ್ನನ್ನು ತಡೆಯುವ ತಾಕತ್ ಇದ್ದರೆ ತಡೆಯಿರಿ : ಬಿಜೆಪಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ

ದಾವಣಗೆರೆ : ಬಿಜೆಪಿ ಸವಾಲ್‌ಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿ ಸವಾಲ್‌ ಹಾಕಿದ್ದು, ದಾವಣಗೆರೆ ವಿಧಾನಸಭೆ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬಿಜೆಪಿಯವರು ಅಯೋಗ್ಯರು ಎಂದು ಶಾಸಕ ಪ್ರದೀಪ್‌ ಈಶ್ವರ್ ನೀಡಿದ್ದ ಹೇಳಿಕೆಗೆ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಿಂದ ಭಾರೀ ವಿರೋಧ ವ್ಯಕ್ತಪಡಿಸಿ, ಪ್ರದೀಪ್‌ ಈಶ್ವರ್‌ಗೆ ತಾಕತ್ತಿದ್ದರೆ ದಾವಣಗೆರೆಗೆ ಬರಲಿ, ಇಲ್ಲಿ ಮಾತನಾಡಲಿ ಎಂದು ದಾವಣಗೆರೆ ಮಾಜಿ ಮೇಯರ್ ಅಜಯ್ ಕುಮಾರ್ ಸವಾಲು ಹಾಕಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್‌ ಈಶ್ವರ್ ದಾವಣಗೆರೆಯಲ್ಲಿ ಬಿಜೆಪಿ ನಾಯಕರು ಓಪನ್ ಚಾಲೆಂಜ್ ಹಾಕಿದ್ದಾರೆ. ಅದರಂತೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಜಿಲ್ಲಾ ಕಛೇರಿಯಿಂದಲೇ ಪ್ರಚಾರ ಆರಂಭಿಸುತ್ತೇನೆ ಆರ್.ಅಶೋಕ್, ವಿಜಯೇಂದ್ರ, ಯತ್ನಾಳ್, ಅನಂತ್ ಕುಮಾರ್ ಹೆಗಡೆ ಅವರಿಗೆ ತಡೆಯುವ ತಾಕತ್ ಇದ್ದರೆ ತಡೆಯಿರಿ ಎಂದು ಹೇಳಿದರು.

ದಾವಣಗೆರೆಯಲ್ಲಿ ಉಪ ಚುನಾವಣೆಯ ಪ್ರಚಾರದ ವೇಳೆ ಪ್ರದೀಪ್ ಈಶ್ವರ್, ಬಿಜೆಪಿಗೆ ಮತ ಹಾಕಬೇಡಿ, ನಿಮ್ಮ ದೇಶಭಕ್ತಿ ಪ್ರಶ್ನೆ ಮಾಡಿದವರು ಬಿಜೆಪಿಯವರು. ನಿಮ್ಮ ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದವರು ಕಾಂಗ್ರೆಸ್ಸಿಗರು ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿಯ ಕಾರ್ಯಕರ್ತರು ಮಂಡ್ಯ ಡಿಸಿ ಮೂಲಕ ಶಾಸಕ ಪ್ರದೀಪ್ ಈಶ್ವರ್ ಅಂಸವಿಂಧಾನಿಕ ಪದ ಬಳಸಿದ್ದಾರೆ. ಕೂಡಲೇ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದರು. 

ಅಲ್ಲದೇ ಸಿದ್ದರಾಮಯ್ಯ ಅವರು ಶಾಸಕರಿಗೆ ಬಹುವಚನ ಬಗ್ಗೆ ಪಾಠ ಮಾಡಬೇಕು. ಪ್ರದೀಪ್ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಿ ಸರ್ಟಿಫಿಕೇಟ್ ತರುವವರೆಗೆ ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು. ಜೊತೆಗೆ ಬಹಿರಂಗ ಸಭೆಯಲ್ಲಿ ಭಾಗವಹಿಸದಂತೆ ದಾವಣಗೆರೆ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದರು.

ಇದೀಗ ಈ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಬಿಜೆಪಿ ನಾಯಕರು ಕೆಟ್ಟದಾಗಿ ಮಾತನಾಡಿರುವುದು ಅವರು, ಬಿಜೆಪಿಯ ದೇಶ ಭಕ್ತಿಯ ಬಗ್ಗೆ ಪ್ರಶ್ನೆ ಮಾಡಿದರೆ ಹೋಗಿ ದೂರು ಕೊಡುತ್ತಾರೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ನಾವೇ. ಬಿಜೆಪಿ ಅವರಿಗೆ ಓದುವ ಸಾಮರ್ಥ್ಯ ಇಲ್ಲ. 2002 ರಲ್ಲಿ ನಾಮಿನೇಟ್ ಆದಾಗ 800 ಜನ ಎಂಎಲ್ಎಗಳು ವೋಟ್ ಹಾಕಿ ಅಬ್ದುಲ್ ಕಲಾಂ ಅವರು ಗೆಲ್ಲುತ್ತಾರೆ. ಯಾರಿಗಾದರೂ ಡೌಟ್ ಇದ್ದರೆ ಚಾಟ್ ಜಿಪಿಟಿ ಅಲ್ಲಿ ನೋಡಲಿ ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದರು.

RELATED ARTICLES
- Advertisment -
Google search engine

Most Popular