ಹುಣಸೂರು: ಪ್ರಕೃತಿ ವಿಕೋಪಕ್ಕೆ ಮನುಷ್ಯರೆ ಹೊರತು ಬೇರಾರು ಅಲ್ಲ. ಪ್ರಕೃತಿ ಭಾಗವಾಗಿ ನಾವು ಬದುಕಬೇಕಿತ್ತು ಆದರೆ ಎಲ್ಲವು ನನ್ನದೇ ಎಂಬ ನಾನತ್ವ, ನಮ್ಮನ್ನ ಜಲಪ್ರಳಯದಂತ ಅವಘಡಕ್ಕೆ ನೂಕಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನ ಕೆ.ಪಿ. ವಿಷಾದಿಸಿದರು.
ನಗರದ ಸಂವಿಧಾನ ವೃತ್ತದಲ್ಲಿ ರೋಟರಿ ಕ್ಲಬ್ ಮತ್ತು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆ ಹಾಗೂ ಎನ್ಎಸ್ಎಸ್ ಸಹೋಗದಲ್ಲಿ ಶಾಲಾ ಮಕ್ಕಳ ಜತೆ ಮೇಣದ ಬತ್ತಿ ಹಿಡಿದು ಬಜಾರ್ ರಸ್ತೆ, ಜೆ.ಎಲ್.ಬಿ. ಸಿಲ್ವರ್ ಜುಬ್ಲಿ ರಸ್ತೆ ಮೂಲಕ ಸಂವಿಧಾನ ಸರ್ಕಲ್ ನಲ್ಲಿ ಅಂತ್ಯಮಾಡಲಾಯಿತು. ನಂತರ ಮಾತನಾಡಿದ ಅವರು , ಇತ್ತೀಚೆಗೆ ಪಕ್ಕದ ಕೇರಳದ ವಯನಾಡು ಭಾಗದಲ್ಲಿ ಮಳೆಯ ಆರ್ಭಟಕ್ಕೆ ಮಾನವ ಕುಲ ನಲಿಗಿಹೋಗಿದ್ದು, ಅದಕ್ಕೆ ನಾವೇ ನೇರ ಹೊಣೆಯಾಗಿದ್ದೇವೆ ಎಂದರು.
ಕಾಡು ಮೇಡುಗಳ ಅಗೆದು ಕಾಂಕ್ರೀಟ್ ಕಟ್ಟಡವ ನಿರ್ಮಿಸಿ ಸಹಜ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಬರುವಂತೆ ಮಾಡಿ, ಮನುಷ್ಯ ಅತಿ ಆಸೆಗೆ ಬಿದ್ದ ಕಾರಣ. ಇಂದು ತಲಾಂತರದಿಂದ ಇದ್ದ ಬೆಟ್ಟ, ಗುಡ್ಡಗಳು, ದಿಡೀರ್ ಭೂಕುಸಿತ ಕಾಣಲು ನಮ್ಮ ದುರಾಸೆಯೇ ಕಾರಣವೆಂದು ಬೇಸರ ವ್ಯಕ್ತಪಡಿಸಿದರು.
ಟ್ಯಾಲೆಂಟ್ ವಿದ್ಯಾಸಂಸ್ಥೆಯ ಮುಖ್ಯಸ್ಥ ನವೀನ್ ರೈ ಮಾತನಾಡಿ, ಇನ್ನು ಮುಂದೆಯಾದರೂ ನಾವುಗಳು ಪ್ರಕೃತಿಯ ಒಡಲಿಗೆ ಮಾಡುತ್ತಿರುವ ದ್ರೋಹದ ಬಗ್ಗೆ ಎಚ್ಚತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ದೊಡ್ಡ ಗಂಡಾಂತರ ಕಾದಿದೆ ಎಂದರು.
ರೋಟರಿ ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಇಂತಹ ದುರಂತಗಳಿಂದ ನಾವು ಪಾಠ ಕಲಿಯಬೇಕು. ಆದರೆ ನಾವುಗಳು ಕ್ಷಣಾರ್ಧದಲ್ಲಿ ಮರೆತು. ನಮ್ಮ ಹಳೇ ಚಾಳಿ ಶುರು ಮಾಡುವುದರಿಂದ ಪ್ರತಿ ವರ್ಷ ಪ್ರಕೃತಿ ನಮಗೆ ಒಂದೊಂದು ಪಾಠ ಕಲಿಸುತ್ತಿದೆ. ಇದಕ್ಕೆ ಮಕ್ಕಳು ಮರಿ ಎನ್ನದೆ ಬಲಿಯಾಗುತ್ತಿರುವುದು ನೋವಿನ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ಆನಂದ್ ಆರ್, ವಲಯ ಸೇನಾನಿ ಪಾಂಡುಕುಮಾರ್ ಪಿ. ಹಿರಿಯ ರೋಟರಿ ಸದಸ್ಯರಾದ ರಾಜಶೇಖರ್, ಡಾ.ವೃಷಬೇಂದ್ರಸ್ವಾಮಿ, ಹೋಟೆಲ್ ಮಂಜಣ್ಣ, ಹಾಗೂ ಶ್ಯಾಮ್, ಬಿ.ಆರ್.ಸಿ. ಸಂತೋಷ್ ಕುಮಾರ್, ಮತ್ತು ತಾಲೂಕು ಕಸಾಪ ಅಧ್ಯಕ್ಷ ಹೆಚ್.ಕೆ. ಮಹದೇವ್,
ಪ್ರಾಂಶುಪಾಲರು ಮಂಜುನಾಥ್ ಎಂ. ಟಿ ,ಟ್ಯಾಲೆಂಟ್ ವಿದ್ಯಾ ಸಂಸ್ಥೆಯ ನಿರ್ದೇಶಕರು ಎನ್ ಆರ್ ಮಂಜುನಾಥ್, ಇಂಟರಾಕ್ಟ್ ಕ್ಲಬ್ ಸಂಚಾಲಕ ಮಂಜುನಾಥ ಡಿ. ಎನ್ ಎಸ್ ಎಸ್ ಸಂಚಾಲಕರು ಜಗದೀಶ್
ಶಿಕ್ಷಕರಾದ ಲೋಹಿತ್, ವಾಣಿಶ್ರೀ, ವಿಂದ್ಯಾ, ಫರ್ಹೀನ್ ತಾಜ್, ಚೈತ್ರ ಇದ್ದರು.