Friday, April 18, 2025
Google search engine

Homeರಾಜ್ಯಈಡಿಗ ಸಮುದಾಯದ ಮೂಲ ಕಸುಬಿಗೆ ಕುತ್ತು ತಂದ ಸರ್ಕಾರಗಳಿಂದ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಕಡೆಗಣನೆ:...

ಈಡಿಗ ಸಮುದಾಯದ ಮೂಲ ಕಸುಬಿಗೆ ಕುತ್ತು ತಂದ ಸರ್ಕಾರಗಳಿಂದ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಕಡೆಗಣನೆ: ಹೆಚ್.ಆರ್.ಶ್ರೀನಾಥ್

ಬಳ್ಳಾರಿ: ಹಿಂದುಳಿದ ಹಾಗೂ ಶೋಷಿತ ವರ್ಗಗಳನ್ನು ಆಡಳಿತ ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ಈಡೀಗ ಸಮುದಾಯ ಸೆಪ್ಟೆಂಬರ್ ಒಂಬತ್ತರಂದು ಬೆಂಗಳೂರಿನಲ್ಲಿ ನಡೆಯುವ ಈಡಿಗ ಸಮುದಾಯದ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಬಳ್ಳಾರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ನಗರದ ಈಡಿಗ ಗೌನ ಮಹಾಜನಸಭಾ ಹಾಸ್ಟೆಲ್ ಆವರಣದಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಹೆಚ್.ಆರ್. ಶ್ರೀನಾಥ್ ಅವರ ಉಸ್ತುವಾರಿಯಲ್ಲಿ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಜನಜಾಗೃತಿ ಸಮಾವೇಶದ ರೂಪು ರೇಷಗಳು ಮತ್ತು ಹಕ್ಕೊತ್ತಾಯಗಳ ಪೂರ್ವಭಾವಿ ಸಭೆ ನಡೆಸಲಾಯಿತು.

ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಕೆಸಿ.ಕೊಂಡಯ್ಯ, ಈಡಿಗ ಸಮುಧಾಯದ ಕಾರ್ಯದರ್ಶಿ ಮೂಲ ಸತೀಶ್, ಹಾಸ್ಟೆಲ್ ಸಮೀತಿಯ ಅಧ್ಯಕ್ಷ್ಯ ಎಂ.ಹೆಚ್. ಶ್ರೀನಾಥ್, ಸೂರ್ಯ ನಾರಾಯಣ ಸೇರಿದಂತೆ ಅನೇಕ ಹಿರಿಯರ ಸಮ್ಮೂಕದಲ್ಲಿ ವೇದಿಕೆ ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶ್ರೀ ಪ್ರಣಾವನಂದ ಸ್ವಾಮೀಜಿಗಳು ಪೂರ್ವ ಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ರಾಜಕೀಯ ಪಕ್ಷಗಳು, ನಮ್ಮ ಈಡಿಗ ಸಮುದಾಯದ ನಾಯಕರನ್ನ ರಾಜಕೀಯವಾಗಿ ಮುಗಿಸಲು ಶಡ್ಯಂತರ ನಡೆಸಲಾಗುತ್ತಿದೆ. ಕುಲ ಕಸುಬನ್ನ ಬಂದ್ ಮಾಡಿಸುವ ಮೂಲಕ ನಮ್ಮ ಜನಾಂಗದ ಜನರು ಆರ್ಥಿಕವಾಗಿ ಹಿಂದುಳಿಯುವುದಲ್ಲದೆ. ಶೈಕ್ಷಣಿಕವಾಗಿಯು ಮಂದೆ ಬರದಂತೆ ಕುಗ್ಗಿಸುವ ಮೂಲಕ ನಮ್ಮನ್ನ ಕಡೆಗಣಿಸಲಾಗಿದೆ. ರಾಜಕೀಯ ಚುಕ್ಕಾಣಿ ಹಿಡಿದ ಇತಿಹಾಸವಿರುವ ನಮ್ಮ ಜನಾಂಗಕ್ಕೆ. ಇದುವರೆಗೂ ಒಂದು ನಿಗಮ ಮಂಡಳಿ ಸ್ಥಾಪಿಸುವ ಮನಸ್ಸು ಮಾಡಲಿಲ್ಲ ಹೀಗಾಗಿ ಜಾಗೃತರಾಗುವ ಕಾಲ ಬಂದಿದೆ ಎಂದರು.

ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚು ಹೆಚ್ಚು ಜನರು ಬಾಗಿಯಾಗುವ ಮೂಲಕ ನಮ್ಮ ಶಕ್ತಿಯನ್ನ ಪ್ರದರ್ಶಿಸಿ ನಮ್ಮ ಹಕ್ಕು ಪಡೆಯುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.

ಈಡಿಗ ಸಮಾಜದ ಹಿರಿಯ ಮುಖಂಡರಾದ ಹೆಚ್.ಆರ್.ಶ್ರೀನಾಥ್ ಮಾತಾನಾಡಿ, ನಮ್ಮ ಸಮುದಾಯದ ಮಕ್ಕಳ ಶೈಕ್ಷಣಿಕ ಉದ್ಯೋಗ, ಆರ್ಥಿಕ ಬಲವರ್ಧನೆಗೆ ಸಮಾವೇಶ ನಡೆಸಲಾಗುತ್ತಿದ್ದು. ಎಲ್ಲಾ ಸರ್ಕಾರಗಳು ನಮ್ಮನ್ನ ರಾಜಕೀಯವಾಗಿ ಬಲಪಡಿಸಿಕೊಂಡು ನಮ್ಮನ್ನ ಕಡೆಗಣಿಸುವ ಕೆಲಸ ನಡೆಯುತ್ತಿದೆ. ನಾವೆಲ್ಲ ಒಗ್ಗಟ್ಟಾಗಿ ನಮ್ಮ ಹಕ್ಕುಗಳನ್ನ ಪಡೆಯಲು ಸಮಾವೇಶಕ್ಕೆ ಭಾಗಿಯಾಗಬೇಕಾಗಿದೆ ಎಂದು ಕರೆ ನೀಡಿದರು.

ಸಭೆಯಲ್ಲಿ, ಕೆ.ಸಿ.ಕೊಂಡಯ್ಯ, ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ್ಯ, ಬಿ.ಮೌಲಾಲಿ, ಜಿಲ್ಲಾಧ್ಯಕ್ಷ್ಯ, ರಾಜಶೇಖರ್ ಸೇರಿದಂತೆ ಈಡೀಗ ಸಮಾಜದ ನೂರಾರು ಜನರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular