ಹನೂರು: ತಾಲೂಕಿನ ಪೊನ್ನಾಚಿ ಗ್ರಾಮದ ಆದಿವಾಸಿ ಕುಟುಂಬಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನೊಂದ ಕುಟುಂಬದವರು ದೂರು ನೀಡಿದ್ದಾರೆ.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸರ್ವೇ ನಂಬರ್ 241/2 ರಲ್ಲಿ 4.48 ಜಮೀನನ್ನು ಸರ್ಕಾರ ಡಿ.ಆರ್ 2596/ 1961 -62 ರಲ್ಲಿ ದಾಸೇಗೌಡ ಬಿನ್ ತಿಮ್ಮೇಗೌಡ ಎಂಬುವರಿಗೆ ಸರ್ಕಾರದ ವತಿಯಿಂದ ಮಂಜೂರು ಮಾಡಲಾಗಿತ್ತು. ತದನಂತರ ದಾಸೇಗೌಡ ಮೃತಪಟ್ಟ ನಂತರ ದಾಸೇಗೌಡರ ಮಕ್ಕಳಾದ ರಂಗಯ್ಯ, ರಂಗಮುತ್ತ ಗೋವಿಂದ ರವರುಗಳು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ನಮ್ಮ ಗಮನಕ್ಕೆ ಬಾರದಂತೆ ಪೊನ್ನಾಚಿ ಸರ್ವೆ ನಂಬರ್ 241/2 ರಲ್ಲಿ 4.48 ಎಕರೆ ಸರ್ವೇ ನಂಬರ್ 261ರಲ್ಲಿ 5 ಎಕರೆ ಜಮೀನನ್ನು ಅಕ್ರಮವಾಗಿ ಎಂ ಆರ್ ಎಚ್ 23/ 2014 – 15 ನೇ ಸಾಲಿನಲ್ಲಿ ದಿನಾಂಕ 16.04.2015ರಂತೆ ಚಿಕ್ಕ ರಂಗೇಗೌಡರವರ ಮಗ ಸಿ ಬಂಗಾರಪ್ಪ ಖಾತೆ ಮಾಡಿಸಿಕೊಂಡಿರುತ್ತಾರೆ. ನಾವುಗಳು ಅನಕ್ಷರಸ್ಥರಾಗಿದ್ದು, ನಮ್ಮ ಈ ವಿಚಾರ ನೋಡಲಾಗಿ ನಮ್ಮ ಗಮನಕ್ಕೆ ಬಂದಿರುತ್ತದೆ. ಆದುದರಿಂದ ನಮ್ಮ ತಂದೆ ದಾಸೇಗೌಡರಿಗೆ ಮಂಜೂರಾಗಿರುವ ನಮ್ಮ ಅನುಭವ ಸ್ವಾಧೀನದಲ್ಲಿರುವ ಜಮೀನಿನ ನಮ್ಮ ಹೆಸರಿಗೆ ಖಾತೆ ಮಾಡಿಕೊಟ್ಟು ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಮಲೆ ಮಾದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳು ವ್ಯಾಪಾರಸ್ಥರು , ಸಮಾಜ ಸೇವಕರು ತಮ್ಮ ಆಸ್ತಿ ಸಂರಕ್ಷಣೆಗಾಗಿ ಇತ್ತೀಚಿನ ದಿನಗಳಲ್ಲಿ ಅಧಿಕಾರದ ಆಸೆಗೆ ರಾಜಕೀಯಕ್ಕೆ ಬರುತ್ತಿರುವುದು ಸಾಮಾನ್ಯ, ಆದರೆ ಸಮಾಜದಲ್ಲಿ ನೊಂದು ಬಂದವರಿಗೆ, ಅಸಹಾಯಕರಿಗೆ, ನೆರವಾಗಬೇಕಾಗಿದ್ದ ಪತ್ರಕರ್ತನೂರ್ವ ಅನಕ್ಷರಸ್ಥರಿಗೆ ಮೋಸ ಮಾಡಿ ಜಮೀನನ್ನು ಕಬಳಿಸಿರುವುದು ನಾಚಿಕೆಗೇಡಿನ ಸಂಗತಿ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ವಾಧೀನದಲ್ಲಿರುವ ಮೂಲ ಹಕ್ಕುದಾರರಿಗೆ ಖಾತೆ ಮಾಡಿಸಿ ಅಕ್ರಮ ಎಸೆಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು
- ಸ್ನೇಹಜೀವಿ ರಾಜು, ಸಾಮಾಜಿಕ ಕಾರ್ಯಕರ್ತ
ಈ ಸಂಬಂಧ ಅಕ್ರಮ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ
ಪಿಟಿಸಿಎಲ್ 1978ರ ಖಾಯ್ದೆ ಪ್ರಕಾರ ಎಸ್ಸಿ, ಎಸ್ಟಿಗಳ ಜಮೀನು ಯಾವುದೇ ಕಾರಣಕ್ಕೂ ಅನ್ಯ ಸಮುದಾಯ ಜನರಿಗೆ ಜಮೀನು ವರ್ಗಾವಣೆ ಮಾಡಬಾರದೆಂದು ನಿಯಮ ಇದೆ. ಈಗಿದ್ದರೂ ಕೂಡ 2014_15ರಲ್ಲಿ ತಹಶಿಲ್ದಾರ್ ಕೋರ್ಟ್ ಯಾವ ಆದಾರದಲ್ಲಿ ಸೋಲಿಗರ ಜಮೀನಿನನ ಇವರ ಹೆಸರಿಗೆ ಆಕ್ರಮ ಖಾತೆ ಮಾಡಿರುವುದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಕಾಯ್ದೆ ಉಲ್ಲಂಘನೆಯಾಗಿ ಆಕ್ರಮ ಖಾತೆ ಮಾಡಿರುವ ತಪಿಸ್ಥತರ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ತೆಗದುಕೂಂಡು ಶಿಕ್ಷೆ ನೀಡಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಈ ಘಟನೆ ಬೆನ್ನಲೆ ಚರ್ಚೆಗೆ ಗ್ರಾಸವಾದ ಮತ್ತೊಂದು ಪ್ರಕರಣ:
ಹನೂರು ತಾಲೂಕಿನಲ್ಲಿ ಇತ್ತೀಚೆಗೆ ಭೂಗಳ್ಳರು ಹೆಚ್ಚಾಗಿದ್ದಾರೆ ಮೃತಪಟ್ಟಿರುವವರು, ಅನಕ್ಷರಸ್ಥರು, ವಾರಸುದಾರರು ಇಲ್ಲದೆ ಇರುವ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೇರೆಯವರಿಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗ್ರಾಸವಾಗಿದೆ.