ಮಂಡ್ಯ: ಶನಿದೇವರ ದೇಗುಲದ ಜಾಗ ಅಕ್ರಮವಾಗಿ ಒತ್ತುವರಿ ಹಿನ್ನಲೆ ಶ್ರೀರಂಗಪಟ್ಟಣ ತಾಲೂಕಿನ ಹೊಸುಂಡವಾಡಿ ಗ್ರಾಮದ ಶನಿಸಿಂಗಾನಪುರ ದೇಗುಲದ ಬಳಿ ನ್ಯಾಯಕ್ಕಾಗಿ ಶನಿ ಭಕ್ತರು ಪೆಟ್ರೋಲ್ ಕ್ಯಾನ್ ದೊಂದಿಗೆ ಧರಣಿಗೆ ಕುಳಿತಿದ್ದಾರೆ.
ಶನಿಸಿಂಗನಾಪುರ ದೇಗುಲದ ಟ್ರಸ್ಟಿ ರಾಜು, ದೇಗಲದ ಮಠಾ ಧಿಪತಿ ಡಾ.ರುದ್ರೇಶ್ ಪ್ರಸಾದ್ ಸೇರಿದಂತೆ ಹಲವು ಭಕ್ತರಿಂದ ಧರಣಿ ನಡೆಸಲಾಗುತ್ತಿದೆ.
ದೇಗುಲದ ಪಕ್ಕದಲ್ಲಿ ಪೆಂಡಾಲ್ ಹಾಕಿ ಧರಣಿ ಕುಳಿತಿರುವ ಶನಿ ಭಕ್ತರು, ನ್ಯಾಯಕೊಡಿಸಿ ಇಲ್ಲವೇ ಸಜೀವ ದಹನಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಶನಿ ದೇಗುಲದ ಸಮೀಪ ಇರುವ ಸರ್ಕಾರಿ ಜಾಗವನ್ನು ಸತ್ಯ ನಾರಾಯಣ ಪ್ರಭಾವಿ ವ್ಯಕ್ತಿ ಒತ್ತುವರಿ ಮಾಡಿದ್ದಾನೆ ಎಂದು ಆರೋಪಿಸಿ ಈಗಾಗಲೇ ಹಲವು ಬಾರಿ ನ್ಯಾಯಕ್ಕಾಗಿ ಬಾರಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮನವಿಗೆ ಸ್ಪಂದಿಸಿಲ್ಲ. ಇದೀಗ ಕಡೆಯದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪೆಟ್ರೋಲ್ ಕ್ಯಾನ್ ನೊಂದಿಗೆ ಶನಿ ಭಕ್ತರು ಧರಣಿಗೆ ಕುಳಿತಿದ್ದಾರೆ.