Friday, April 11, 2025
Google search engine

Homeರಾಜ್ಯಸುದ್ದಿಜಾಲಹುಣಸೂರು ಉದ್ದಿಮೆಯಿಂದ ಸರ್ಕಾರಿ ಜಾಗ ಅಕ್ರಮ ಪರಭಾರೆ : ಎಚ್. ವಿಶ್ವನಾಥ್ ಆರೋಪ

ಹುಣಸೂರು ಉದ್ದಿಮೆಯಿಂದ ಸರ್ಕಾರಿ ಜಾಗ ಅಕ್ರಮ ಪರಭಾರೆ : ಎಚ್. ವಿಶ್ವನಾಥ್ ಆರೋಪ

ಹುಣಸೂರು: ಕೊಡಗು ಕಾಫಿ ಬೆಳೆಗಾರರ ಸಂಘದ ಅಧೀನದಲ್ಲಿರುವ ಹುಣಸೂರಿನ ಪ್ರತಿಷ್ಠಿತ ಕಾಫಿ ವರ್ಕ್ಸ್ ಆಡಳಿತ ಮಂಡಳಿಯವರು ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾಸಗಿ ಅವರಿಗೆ ಪರಭಾರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ನಗರದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಗರದ ಸರ್ವೇ ನಂಬರ್ 28 ರಲ್ಲಿನ ಸುಮಾರು 4 ಎಕರೆ ಜಾಗವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಉಪಾಧ್ಯಕ್ಷೆ ಡಾ ಪುಷ್ಪ ಅಮರ ನಾಥ್ ಹೆಸರಿಗೆ ಬಾಡಿಗೆ ಆಧಾರದಲ್ಲಿ ನೀಡುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ.

ಈ ಮೂಲಕ ಪುಷ್ಪ ಅಮರನಾಥ್ ದಂಪತಿಗಳು ನಕಲಿ ದಾಖಲೆ ಸೃಷ್ಟಿಸಿ ಆ ಜಾಗಕ್ಕೆ ಲೈಸೆನ್ಸ್ ಕೂಡ ಪಡೆದಿದ್ದಾರೆ ಎಂದು ಆರೋಪಿಸಿರುವ ವಿಶ್ವನಾಥ್ ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧಿಸಿದ ನಗರಸಭೆ ಅಧಿಕಾರಿಗಳು, ಕಾಫಿ ಮಂಡಳಿ ಯವರು ಹಾಗೂ ಬಾಡಿಗೆದಾರರ ವಿರುದ್ಧ ಕಾನೂನು ರಿತ್ಯಾ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಸತೀಶ್ ಕುಮಾರ್, ಗಣೇಶ್ ಕುಮಾರಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷ ಶಿವಕುಮಾರ್, ದಲಿತ ಮುಖಂಡ ಶಿವಶೇಖರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಫಜಾಲೂಲ ಹಾಗೂ ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಇದ್ದರು.

RELATED ARTICLES
- Advertisment -
Google search engine

Most Popular