ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದ ಕಲ್ಯಾಣಿ ಕೊಳದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಟ್ಟಣದ ನಿವಾಸಿಗಳಾದ ಆಕಾಶ್, ಸಾಗರ್ ಹಾಗು ಚಿಕ್ಕತುಪ್ಪೂರು ಗ್ರಾಮದ ಮಣಿಕಂಠ ಬಂಧಿತ ಆರೋಪಿಗಳಾಗಿದ್ದು, ಇವರಿಂದ ೫೦ ಸಾವಿರ ರೂ. ಮೌಲ್ಯದ ೧ ಕೆ.ಜಿ, ೧೦೦ ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಯುವಕರು ಪಟ್ಟಣದ ಹೊರ ವಲಯದ ಚಾಮರಾಜನಗರದ ಕಲ್ಯಾಣಿ ಕೊಳದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.