ಮೈಸೂರು : ಕಾನೂನು ಬಾಹಿರವಾಗಿ ವಿವಿಧ ಕಂಪನಿಗಳ ಗ್ಯಾಸ್ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಂಡು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ೪ ಜನರ ಸಮೇತ ೧೨೭ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಸಿಲಿಂಡರ್ ರೀಫಿಲ್ಲಿಂಗ್ ಬಳಸುತ್ತಿದ್ದ ೭೯ ರಾಡುಗಳು, ೨ ಡಿಜಿಟಲ್ ಯಂತ್ರ ಹಾಗೂ ೧ ಗೂಡ್ಸ್
ವಾಹನವನ್ನೂ ಸಹ ವಶಕ್ಕೆ ಪಡೆದಿದ್ದಾರೆ.
ಜನವರಿ ೧೧ ರಂದು ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆಸರೆ ಸರ್ವೇ ನಂ.೩೦೩ ರ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಶೆಡ್‌ನಲ್ಲಿ ಅಕ್ರಮವಾಗಿ ವಿವಿಧ ಕಂಪನಿಗಳ ಗ್ಯಾಸ್ ದಾಸ್ತಾನು ಮಾಡಿಕೊಂಡು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಪಯೋಗಿಸಿಕೊಂಡು ವಾಣಿಜ್ಯ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಯಾವುದೇ ಅದಿಕೃತ ರಹದಾರಿ ಮತ್ತು ಖರೀದಿ ಮಾಡಿದ ಬಿಲ್
ಇಲ್ಲದೆ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆಂದು ಸಿಸಿಬಿ ಘಟಕದ ಅಧಿಕಾರಿಗಳು ಆರೋಪಿಸಿದ್ದಾರೆ.