ಚಳ್ಳಕೆರೆ: ಮಹಿಳಾ ಸ್ತ್ರೀ ಶಕ್ತಿ ಸಂಘದಿಂದ ಮಹಿಳೆಯರು ನೀಡಿದ ಮಾಹಿತಿ ಪಡೆದು ಅಬಕಾರಿ ಪೋಲಿಸ್ ಗೋಪನಹಳ್ಳಿ ಗ್ರಾಮ ಟೀ ಸ್ಟಾಲ್ ಮೇಲೆ ದಾಳಿ ನಡೆಸಿದಾಗ ಟೀ ಸ್ಟಾಲ್ ನಲ್ಲಿ ವ್ಯಕ್ತಿ ಮೂರು ಸಾವಿರಕ್ಕಿಂತ ಹೆಚ್ಚು ಬೆಲೆ ಬಾಳುವ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿರುವುದು ಪತ್ತೆಯಾದ ಹಿನ್ನೆಲೆ ಅಬಕಾರಿ ನಿರೀಕ್ಷಕರು ದಾಳಿ ನಡೆಸಿ ಸುಮಾರು 6.030 ಲೀಟರ್ ಮದ್ಯವನ್ನು ಅಬಕಾರಿ ಇನ್ಸ್ಪೆಕ್ಟರ್ ಸಿ ನಾಗರಾಜ್ ನೇತೃತ್ವದ ತಂಡ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವುದೇ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇನ್ಸ್ಪೆಕ್ಟರ್ ನಾಗರಾಜ್ ಮಾಹಿತಿ ನೀಡಿದರು. ಅಕ್ರಮ ಮದ್ಯ ಮಾರಾಟದಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ ಆದ್ದರಿಂದ ಯಾರು ಅಕ್ರಮ ಮದ್ಯ ಮಾರಾಟವನ್ನು ಮಾಡಬಾರದು ಎಂದು ಅಬಕಾರಿ ಇನ್ಸ್ಪೆಕ್ಟರ್ ಎಚ್ಚರಿಕೆಯನ್ನು ನೀಡಿದರು.ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಸಿ ನಾಗರಾಜ್ ,ಸಬ್ ಇನ್ಸ್ಪೆಕ್ಟರ್ ರಂಗಸ್ವಾಮಿ, ತಿಪ್ಪಯ್ಯ, ನಾಗರಾಜ್ ತೋಳಮಟ್ಟಿ ಇನ್ನಿತರ ಅಬಕಾರಿ ಸಿಬ್ಬಂದಿಗಳು ಹಾಜರಿದ್ದರು.