ಹನೂರು: ಅಕ್ರಮವಾಗಿ ಗಾಂಜಾ ಶೇಖರಣೆ ಮಾಡಿದ್ದ ಮಹಿಳೆಯೋರ್ವಳನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಹೂಗ್ಯಂ ಗ್ರಾಮದ ಗಂಗಮ್ಮ(44) ಬಂಧಿತ ಆರೋಪಿಯಾಗಿದ್ದಾಳೆ.
ಘಟನೆ ವಿವರ: ಹೂಗ್ಯಂ ಗ್ರಾಮದ ಗಂಗಮ್ಮ ಅಕ್ರಮವಾಗಿ ಗಾಂಜಾ ಶೇಖರಣೆ ಮಾಡಿರುವ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಅಬಕಾರಿ ಉಪ ಆಯುಕ್ತ ನಾಗಶಯನ,ಉಪ ಅಧೀಕ್ಷಕ ಎಂ ಡಿ ಮೋಹನ್ ಕುಮಾರ್ , ಕೊಳ್ಳೇಗಾಲ ಅಬಕಾರಿ ನಿರೀಕ್ಷಕ ಸುನಿಲ್ .ಡಿ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕ ಶ್ರೀಧರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ೮೦೦ ಗ್ರಾಂ ಒಣ ಗಾಂಜಾ ಸಂಗ್ರಹಣೆ ಮಾಡಿರುವುದು ಕಂಡುಬಂದಿದೆ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದು ಎನ್ ಡಿ.ಫಿ.ಎಸ್ ಪ್ರಕರಣ ದಾಖಲಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ಪೇದೆಗಳಾದ ರಮೇಶ್ ಎಂ,ಸುಜನ್ ರಾಜ್, ಪ್ರದೀಪ್ ಕುಮಾರ್.ಕೆ, ಸುಂದರಪ್ಪ , ಯಶೋಧ ಚಾಲಕ ಮಂಜು ಪ್ರಸಾದ್ ಪಾಲ್ಗೊಂಡಿದ್ದರು.