Friday, April 4, 2025
Google search engine

Homeರಾಜ್ಯಬೆಂಗಳೂರಿನಲ್ಲಿ ಬಾಂಗ್ಲಾ ಪ್ರಜೆಗಳ ಅಕ್ರಮ ವಾಸ; ರಾಜ್ಯ ಮತ್ತು ದೇಶಕ್ಕೆ ಅಪಾಯ: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಬಾಂಗ್ಲಾ ಪ್ರಜೆಗಳ ಅಕ್ರಮ ವಾಸ; ರಾಜ್ಯ ಮತ್ತು ದೇಶಕ್ಕೆ ಅಪಾಯ: ಬಸವರಾಜ ಬೊಮ್ಮಾಯಿ

ನವದೆಹಲಿ: ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಅಕ್ರಮವಾಗಿ ವಾಸವಾಗಿರುವುದು ರಾಜ್ಯಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಾಂಗ್ಲಾ ಪ್ರಜೆಗಳ ಅಕ್ರಮ ಪ್ರವೇಶದ ಮೂಲ ಸಮಸ್ಯೆ ಇರುವುದು ಬಾಂಗ್ಲಾ ಗಡಿ ಭಾಗದಲ್ಲಿ, ಪಶ್ಚಿಮ ಬಂಗಾಳ ಸರ್ಕಾರ ತನ್ನ ರಾಜಕಾರಣಕ್ಕಾಗಿ ಬಾಂಗ್ಲಾ ನುಸುಳುಕೋರರಿಗೆ ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುತ್ತಿದೆ. ಅವರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುತ್ತಾರೆ. ನಕಲಿ ಐಡಿ ಕಾರ್ಡ್, ಆಧಾರ ಕಾರ್ಡ್ ಕೊಡುತ್ತಾರೆ. ಅದಾದ ಮೇಲೆ ಅವರು ಬೇರೆ ಬೇರೆ ರಾಜ್ಯಗಳಿಗೆ ಬರುತ್ತಾರೆ ಎಂದರು.

ಬೆಂಗಳೂರು ಆಕರ್ಷಣೀಯ ನಗರವಾಗಿದ್ದು, ಹೀಗಾಗಿ ಅವರು ಇಲ್ಲಿ ಕೆಲಸ ಹುಡುಕಿಕೊಂಡು ಬಂದು ಇಲ್ಲಿಯೇ ಪ್ರತ್ಯೇಕ ಕಾಲೋನಿ ಮಾಡಿಕೊಳ್ಳುವಷ್ಟು ಬೆಳೆದಿದ್ದಾರೆ. ನಾನು ಗೃಹ ಸಚಿವನಾಗಿದ್ದಾಗ ಸುಮಾರು ೬೪ ಜನ ಬಾಂಗ್ಲಾ ಅಕ್ರಮ ವಲಸಿಗರನ್ನು ಪತ್ತೆ ಹಚ್ಷಿ ಅವರನ್ನು ಬಾಂಗ್ಲಾ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದೇವು. ಆದರೆ, ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡಲಿಲ್ಲ. ನಮ್ಮ ಪೊಲಿಸರಿಗೆ ಪಶ್ಚಿಮ ಬಂಗಾಳದ ಪೊಲಿಸರು ಸಹಕಾರ ನೀಡಲಿಲ್ಲ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿಯೇ ಅವರು ಉಳಿದಿದ್ದಾರೆ ಎಂದು ಗೊತ್ತಾಯಿತು ಎಂದು ಹೇಳಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವ ಪರಮೇಶ್ವರ ಅವರು ಕ್ರಮ ತೆಗೆದುಕೊಳ್ಳುತ್ತೇನೆ ಎಂದ ತಕ್ಷಣ ಕ್ರಮ ಆಗುವುದಿಲ್ಲ. ಹಲವಾರು ವಿಚಾರದಲ್ಲಿ ಅವರ ಹೇಳಿಕೆಗೂ ಪೊಲೀಸ್ ಇಲಾಖೆ ನಡವಳಿಕೆಗೂ ಸಂಬಂಧ ಇಲ್ಲದಿರುವುದನ್ನು ನಾವು ನೋಡಿದ್ದೇವೆ. ಇದು ಬೇರೆ ಪ್ರಕರಣಗಳಂತಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿ ಬಾಂಗ್ಲಾ ದೇಶದ ಕಾಲೋನಿಗಳಾಗಿವೆ ಅವುಗಳನ್ನು ಪತ್ತೆ ಹಚ್ಚಿ ಅವರನ್ನು ಹೊರಗೆ ಹಾಕುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಅವರು ಸರ್ಕಾರಿ ವ್ಯವಸ್ಥೆಯಲ್ಲಿ ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ಗೃಹ ಸಚಿವ ಪರಮೇಶ್ವರ್ ಅವರು ಕೇವಲ ಹೇಳಿಕೆ ಕೊಡುವುದಲ್ಲ, ಅವರು ಕಾರ್ಯಾಚರಣೆಗೆ ಇಳಿಯಬೇಕು. ಇಲ್ಲದಿದ್ದರೆ ದೊಡ್ಡ ಆಪತ್ತು ಕಾದಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular