Tuesday, April 22, 2025
Google search engine

Homeಅಪರಾಧಕಾನೂನುಸೈಟ್ ಅಕ್ರಮ ಹಂಚಿಕೆ: ಮುಡಾದಲ್ಲಿ ಮತ್ತೊಂದು ಹಗರಣ

ಸೈಟ್ ಅಕ್ರಮ ಹಂಚಿಕೆ: ಮುಡಾದಲ್ಲಿ ಮತ್ತೊಂದು ಹಗರಣ


ಮೈಸೂರು : ಸೈಟ್ ಅಕ್ರಮವಾಗಿ ಹಂಚಲಾಗಿದೆ ಎಂದು ಈಗಾಗಲೇ ಮುಡಾದಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಮುಡಾದಲ್ಲಿ ಗ್ರಾಹಕರ ಕೋಟ್ಯಾಂತರ ಹಣವನ್ನು ಅಲ್ಲಿನ ಸಿಬ್ಬಂದಿಗಳೇ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗ್ರಾಹಕರು ಕಟ್ಟುವ ಹಣವನ್ನು ಜೇಬಿಗೆಳಿಸಿದ ಮುಡಾ ನೌಕರರು, ಜನರು ಕಟ್ಟಿದ್ದ ದುಡ್ಡನ್ನೇ ಮುಡಾ ನೌಕರರು ನುಂಗಿದ ಆರೋಪ ಕೇಳಿ ಬಂದಿದೆ. ಖಾತೆ ವರ್ಗಾವಣೆ, ಕಂದಾಯ ವಿವಿಧ ಸೇವೆಗಳಿಗೆ ಕಟ್ಟುವ ಹಣ ಬ್ಯಾಂಕ್ ಚಲನ್ ಸೀಲ್ ಬಳಸಿಕೊಂಡು ಕೋಟ್ಯಾಂತರ ಹಣ ನುಂಗಿದ್ದಾರೆ ಎನ್ನಲಾಗಿದೆ.

ಮುಡಾ ನೌಕರರ ಜೊತೆ ಬ್ಯಾಂಕ್ ಸಿಬ್ಬಂದಿ ಕೂಡ ಶಾಮೀಲು ಆಗಿರುವ ಆರೋಪ ಕೇಳಿ ಬಂದಿದೆ. ೯೩ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಜಿಬಿ ಕೇಳಿಸಿರುವ ಆರೋಪ ಕೇಳಿ ಬಂದಿದೆ.ಹಣ ಪಾವತಿಸಿ ಎಂದು ಮುಡಾ ಹಣಕಾಸು ವಿಭಾಗದಿಂದ ಪತ್ರ ಬಂದಿದೆ. ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಿಗೆ ಸಿಬ್ಬಂದಿಗಳು ಪತ್ರ ಬರೆದಿದ್ದಾರೆ. ೯೩ ಚಲನ್ ಗಳಲ್ಲಿ ೯೨ ಚಲನ ಬ್ಯಾಂಕ್ ಖಾತೆಗೆ ಬಂದಿಲ್ಲ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಈ ಕುರಿತಂತೆ ಮುಡಾ ಹಣಕಾಸು ವಿಭಾಗಕ್ಕೆ ಬ್ಯಾಂಕಿನಿಂದ ಮರು ಉತ್ತರ ನೀಡಲಾಗಿದೆ. ಬ್ಯಾಂಕಿನ ಉತ್ತರ ನೋಡಿ ಹಣಕಾಸು ವಿಭಾಗ ಗಾಬರಿಯಾಗಿದೆ.ಬ್ಯಾಂಕ್ ಸೀಲು ದುರುಪಯೋಗಪಡಿಸಿಕೊಂಡು ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮುಡ ನೌಕರರ ವಿರುದ್ಧ ಕೋಟ್ಯಾಂತರ ಹಣ ಲೂಟಿ ಆರೋಪ ಕೇಳಿ ಬಂದಿದೆ. ಹಣ ಕಟ್ಟಿದ್ದಾರೆ ಎಂದು ಬ್ಯಾಂಕ್ ಸೀಲ್ ಹಾಕಿದ್ದಾರೆ ಆದರೆ ಖಾತೆಗೆ ಮಾತ್ರ ಹಣ ವರ್ಗಾವಣೆ ಇಲ್ಲ. ಹಾಗಾಗಿ ಮುಡಾ ನೌಕರರ ವಿರುದ್ಧ ಇದೀಗ ಕೋಟ್ಯಾಂತರ ಹಣವಾಗಿರುವ ಆರೋಪ ಕೇಳಿ ಬಂದಿದೆ.

RELATED ARTICLES
- Advertisment -
Google search engine

Most Popular