ಮಂಡ್ಯ: ಗೋ ಹತ್ಯೆ ನಿಷೇಧವಿದ್ರು, ಅಕ್ರಮ ಕಸಾಯಿಖಾನೆ ತಲೆ ಎತ್ತಿದ್ದು, ಸಕ್ಕರೆನಾಡು ಮಂಡ್ಯದಲ್ಲಿ ಗೋವುಗಳ ಮಾರಣ ಹೋಮ ನಡೆಯುತ್ತಿದೆ.
ಮಂಡ್ಯ ತಾಲ್ಲೂಕಿನ ತೂಬಿನಕೆರೆ ಹೊರಹೊಲಯದ ಜಮೀನಿನಲ್ಲಿ ಅಕ್ರಮ ಗೋಡೌನ್ ನಿರ್ಮಿಸಲಾಗಿದ್ದು, ಗೋಡೌನ್‌ನಲ್ಲಿ ಜಾನುವಾರುಗಳನ್ನು ಕೊಂದು, ಅವುಗಳ ಮೂಳೆ, ಮಾಂಸ ಶೇಖರಣೆ ಮಾಡಲಾಗುತ್ತಿದೆ. ಮೂಳೆಗಳ ಮೇಲೆ ನೋಣಗಳು ಮುತ್ತಿವೆ.
ದಂಧೆಕೋರರು ಗುಜರಿ ಹೆಸರಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದಾರೆ. ಮಾಂಸದ ಕೊಳೆತ ವಾಸನೆ ಹೆಚ್ಚಾಗ್ತಿದ್ದಂತೆ ಅಕ್ಕಪಕ್ಕದವರಲ್ಲಿ ಅನುಮಾನ ಮೂಡಿದ್ದು, ಭಜರಂಗದಳದ ಕಾರ್ಯಕರ್ತರು ಅಕ್ರಮ ಗೋಡೌನ್ ನನ್ನು ಪತ್ತೆ ಹಚ್ಚಿದ್ದಾರೆ.
ತೂಬಿನಕೆರೆ ಗ್ರಾಮದ ಲಿಂಗರಾಜು ಎಂಬುವರ ಜಮೀನು ಬಾಡಿಗೆ ಪಡೆದಿದ್ದ ದಂಧೆಕೋರರು, ಲಿಂಗರಾಜುವಿನ ಆಲೆಮನೆಯಲ್ಲಿಯೆ ಮೂಳೆಗಳ ಫೌಢರ್ ತಯಾರಿಸುತ್ತಿದ್ದರು. ಮಾತ್ರವಲ್ಲದೇ ಫೌಡರ್ ಅನ್ನು ರಫ್ತು ಮಾಡುತ್ತಿದ್ದರು ಎಂಬ ಆರೋಪವು ಕೇಳಿಬಂದಿದೆ.
ಈ ಸಂಬಂಧ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕೂಡ ಕ್ರಮ ಕೈಗೊಂಡಿಲ್ಲವೆಂದು ಅಧಿಕಾರಿಗಳ ವಿರುದ್ಧ ಸ್ಥಳೀಯ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.