ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್‌ಗಳಿಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಲು ಆಗ್ರಹಿಸಿ ನ.11ರ ಬೆಳಿಗ್ಗೆ 9 ಗಂಟೆಯಿಂದ ನ್ಯಾಯ ಸಿಗುವ ತನಕ ಧರಣಿ ನಡೆಯಲಿದೆ ಎಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳನ್ನು ಸಮಗ್ರವಾದ ತನಿಖೆ ನಡೆಸಿ ದುರುದ್ದೇಶದಿಂದ ಅಕ್ರಮವಾಗಿ ರಚಿಸಿಕೊಂಡ ಶ್ರೀ ಮಹಾಗಣ ಪತಿ ಸೇವಾ ಟ್ರಸ್ಟ್ ಸೌತಡ್ಕ (ರಿ) ಅನ್ನು ರದ್ದು ಪಡಿಸಿ ಅದರ ಎಲ್ಲಾ ಆಸ್ತಿಯನ್ನು ಅದರ ನಿಜವಾದ ಮಾಲೀಕರಾದ ಸೌತ್ತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು.
ಟ್ರಸ್ಟ್ ಆದ ಬಳಿಕ ದಿಂದ ಇಂದಿನವರೆಗೆ ಆದ ಎಲ್ಲಾ ಆದಾಯಗಳ ಖರ್ಚು ವೆಚ್ಚಗಳ ತನಿಖೆ ನಡೆಸಿ ಎಲ್ಲಾ ಆದಾಯಗಳನ್ನು ದೇವಳದ ಖಜಾನೆಗೆ ತುಂಬಿಸುವಂತೆ ಆದೇಶಿಸಬೇಕು. ಕೊಕ್ಕಡ ಗ್ರಾಮದ ಸ.ನಂ. 215/2. 215/4, 215/5 ರಲ್ಲಿಯ ಒಟ್ಟು 3.46 ಎಕ್ರೆ ಸ್ಥಿರಾಸ್ತಿಯನ್ನು ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ ಭಕ್ತರ ಸಹಾಯದೊಂದಿಗೆ ಮೇಲೆ ಹೇಳಿದ ವಾಸುದೇವ ಶಬರಾಯ, ರಾಘವ . ಕೆ ಮತ್ತು ವಿಶ್ವ ನ ನಾಥ ಕೆ ಅವರು ಹೆಸರಿನಲ್ಲಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ದೇವಸ್ಥಾನದ ಹೆಸರಿಗೆ ಬರೆಯಿಸಿಕೊಳ್ಳುವರೇ ಸೂಕ್ತ ಆದೇಶ ಮಾಡ ಬೇಕಾಗಿ ಸರಕಾರವನ್ನು ಆಗ್ರಹಿಸಿ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಅನಿರ್ಧಿಷ್ಟ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ಶಬರಾಯ ತಿಳಿಸಿದ್ದಾರೆ.