ಗುಂಡ್ಲುಪೇಟೆ: ಅಕ್ರಮವಾಗಿ ಕೇರಳಕ್ಕೆ ಎಮ್ಮೆಗಳನ್ನು ಲಾರಿ ಮೂಲಕ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಪೆÇಲೀಸರು ದಾಳಿ ನಡೆಸಿ 9 ಎಮ್ಮೆಗಳನ್ನು ರಕ್ಷಣೆ ಮಾಡಿ ಮೂವರು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಗಡಿ ಮದ್ದೂರು ಚೆಕ್ ಪೆÇೀಸ್ಟ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಮಿಳುನಾಡು ಮೂಲದ ಅಶ್ರಫ್, ಕೇರಳ ಮೂಲದ ಇರ್ಫಾನ್, ಸಿಹಾಬ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಕೃಷ್ಣ ಸ್ಥಳದಿಂದ ಓಡಿ ಹೋಗಿದ್ದಾನೆ. ತಮಿಳುನಾಡು ನೋಂದಣಿಯ ಲಾರಿಯಲ್ಲಿ ಅಕ್ರಮವಾಗಿ ಎಮ್ಮೆಗಳನ್ನು ತುಂಬಿಕೊಂಡು ಕೇರಳಕ್ಕೆ ತೆರಳುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಠಾಣೆ ಸಬ್ ಇನ್ಸ್ ಪೆಕ್ಟರ್ ಕಿರಣ್ ನೇತೃತ್ವದಲ್ಲಿ ದಾಳಿ ನಡೆಸಿ ಒಂದು ಕಾರು, ಲಾರಿ ಸಮೇತ 9 ಎಮ್ಮೆಗಳನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಲಾಗಿದೆ. ಇನ್ನೂ ಈ ಕುರಿತು ಗುಂಡ್ಲುಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಪೆÇಲೀಸ್ ಪೇದೆಗಳಾದ ಪ್ರಕಾಶ್, ಶಶಿಧರಮೂರ್ತಿ, ಮಹೇಶ್ ಭಾಗವಹಿಸಿದ್ದರು.